ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4,272 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,31,026ಕ್ಕೆ ಏರಿಕೆಯಾಗಿದೆ.
ಇನ್ನು, ಒಂದೇ ದಿನ 115 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 34,654ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 6,126 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 26,91,123ಕ್ಕೆ ಏರಿಕೆಯಾಗಿದ್ದು, ಸದ್ಯ 1,05,226 ಸಕ್ರಿಯ ಪ್ರಕರಣಗಳಿವೆ.
ಇಂದೇ 4,272 ಸೋಂಕು: ಯಾವ ಜಿಲ್ಲೆಯಲ್ಲಿ, ಎಷ್ಟು?
ಬಾಗಲಕೋಟೆ-3, ಬಳ್ಳಾರಿ-61, ಬೆಳಗಾವಿ-115, ಬೆಂ.ಗ್ರಾ-89, ಬೆಂಗಳೂರು-955, ಬೀದರ್-1, ಚಾಮರಾಜನಗರ-71, ಚಿಕ್ಕಬಳ್ಳಾಪುರ-52, ಚಿಕ್ಕಮಗಳೂರು-200, ಚಿತ್ರದುರ್ಗ-75, ದ.ಕನ್ನಡ-375, ದಾವಣಗೆರೆ-80, ಧಾರವಾಡ-60, ಗದಗ-30, ಹಾಸನ-320, ಹಾವೇರಿ-27, ಕಲಬುರಗಿ-22, ಕೊಡಗು-160, ಕೋಲಾರ-134, ಕೊಪ್ಪಳ-26, ಮಂಡ್ಯ-134, ಮೈಸೂರು-647, ರಾಯಚೂರು-19, ರಾಮನಗರ-13, ಶಿವಮೊಗ್ಗ-217, ತುಮಕೂರು-159, ಉಡುಪಿ-139, ಉ.ಕನ್ನಡ-62, ವಿಜಯಪುರ-12, ಯಾದಗಿರಿ-14 ಪ್ರಕರಣಗಳು ಪತ್ತೆಯಾಗಿವೆ.