ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ; ಈ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!

ಕಳೆದ ಒಂದು ವಾರದಿಂದ ತನ್ನ ಆರ್ಭಟ ನಿಲ್ಲಿಸಿದ್ದ ಮಳೆರಾಯ ಮತ್ತೆ ಅಬ್ಬರವನ್ನು ಶುರು ಮಾಡಿದ್ದು, ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಇಂದೂ ಕೂಡಾ…

rain-vijayaprabha-news

ಕಳೆದ ಒಂದು ವಾರದಿಂದ ತನ್ನ ಆರ್ಭಟ ನಿಲ್ಲಿಸಿದ್ದ ಮಳೆರಾಯ ಮತ್ತೆ ಅಬ್ಬರವನ್ನು ಶುರು ಮಾಡಿದ್ದು, ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಲ್ಲದೆ, ಇಂದೂ ಕೂಡಾ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಮಂಡ್ಯ, ಮೈಸೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಕೆಲ ಭಾಗದಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಭಾಗದಲ್ಲಿ 60 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಇನ್ನು, ಬೆಂಗಳೂರು ನಗರದ ಹಲವೆಡೆ ಗಾಳಿ ಸಹಿತ ಮಳೆಯಾಗುತ್ತಿದ್ದು, ತ್ಯಾಗರಾಜನಗರ, ಬಸವನಗುಡಿ, ಬನಶಂಕರಿ, ಕಾರ್ಪೊರೇಷನ್​, ಕೆ.ಆರ್.ಮಾರ್ಕೆಟ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಮತ್ತು ಶಾಂತಿನಗರ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ. ಬೆಂಗಳೂರಿಗೆ ಇನ್ನು 5 ದಿನ ಮಳೆ ಸುರಿಯಲಿದೆ.

Vijayaprabha Mobile App free

ವಿವಿಧ ನಗರಗಳ ತಾಪಮಾನ:

ಬೆಂಗಳೂರು: 26-19 ಮಂಗಳೂರು: 27-23, ಶಿವಮೊಗ್ಗ: 27-21, ಬೆಳಗಾವಿ: 27-19, ಮೈಸೂರು: 26-20, ಚಾಮರಾಜನಗರ: 26-20, ಚಿಕ್ಕಬಳ್ಳಾಪುರ:26-19, ಕೋಲಾರ: 27-20, ತುಮಕೂರು: 27-20, ದಾವಣಗೆರೆ: 27-21, ಚಿಕ್ಕಬಳ್ಳಾಪುರ: 26-19, ಕೋಲಾರ: 27-20, ಬೆಳಗಾವಿ: 27-19, ಮೈಸೂರು: 26-20, ಮಂಡ್ಯ: 27-21, ರಾಮನಗರ:27-21, ಹಾಸನ: 24-18, ಚಾಮರಾಜನಗರ:26-20, ತುಮಕೂರು: 27-20 ಡಿಗ್ರಿ ಸೆಲ್ಸಿಯಸ್ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.