ಭವಿಷ್ಯದಲ್ಲಿ ಯಾವುದೇ ಹಣಕಾಸಿನ ತೊಂದರೆ ಇರಬಾರದು ಎಂದು ನೀವು ಯೋಚಿಸುತ್ತಿದ್ದೀರಾ? ಪ್ರತಿ ತಿಂಗಳು ಹಣ ಪಡೆಯಲು ಬಯಸುತ್ತಿದ್ದೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ಮೋದಿ ಸರ್ಕಾರ ನಿಮಗಾಗಿ ಒಂದು ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಗೆ ಸೇರುವ ಮೂಲಕ ನೀವು ಪ್ರತಿ ತಿಂಗಳು ಹಣವನ್ನು ಪಡೆಯಬಹುದು.
ಈ ಯೋಜನೆಯನ್ನು ಪ್ರಧಾನ್ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ ಎಂದು ಕರೆಯಲಾಗುತ್ತದೆ. ಇದು ಪಿಂಚಣಿ ಯೋಜನೆ. ಇದರರ್ಥ ನೀವು ಈ ಯೋಜನೆಗೆ ಸೇರಿದರೆ ಪ್ರತಿ ತಿಂಗಳು ನಿಮಗೆ ಪಿಂಚಣಿ ಸಿಗುತ್ತದೆ. ಅಸಂಘಟಿತ ವಲಯದಲ್ಲಿರುವವರು ಈ ಯೋಜನೆಗೆ ಸೇರಬಹುದು. ಮಾಸಿಕ ಆದಾಯವು ರೂ15,000 ಮೀರಬಾರದು. 18 ರಿಂದ 40 ವರ್ಷದೊಳಗಿನವರು ಈ ಯೋಜನೆಗೆ ಸೇರಲು ಅರ್ಹರು.
ಶ್ರಮ ಯೋಗಿ ಮನ್ ಧನ್ ಯೋಜನೆ ಯೋಜನೆಗೆ ಸೇರ್ಪಡೆಗೊಂಡರೆ ನಿಮಗೆ ತಿಂಗಳಿಗೆ 3,000 ರೂ. ಸಿಗುತ್ತದೆ. ಅಂದರೆ ವರ್ಷಕ್ಕೆ 36 ಸಾವಿರ ರೂ. ಸಿಗುತ್ತದೆ. ಈ ರೀತಿಯ ಹಣವು 60 ವರ್ಷ ದಾಟಿದ ನಂತರ ಹೀಗೆ ಪ್ರತಿ ತಿಂಗಳು ಹಣ ಬರುತ್ತದೆ ಎಂದು ಗಮನಿಸಬೇಕು. ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (ಕಾಮನ್ ಸರ್ವಿಸ್ ಸೆಂಟರ್, CSC) ಹೋಗಿ ಈ ಯೋಜನೆಗೆ ಸೇರಬಹುದು. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಇದ್ದರೆ ಸಾಕು.
ಯೋಜನೆಗೆ ಸೇರುವವರು ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. 55 ರಿಂದ 200 ರೂ. ವರೆಗೆ ಕಟ್ಟಬೇಕಾಗುತ್ತದೆ. ನಿಮ್ಮ ವಯಸ್ಸಿನ ಆಧಾರದ ಮೇಲೆ ನೀವು ಪಾವತಿಸುವ ಮೊತ್ತ ಕೂಡ ಬದಲಾಗುತ್ತದೆ. ನೀವು 18 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ, ತಿಂಗಳಿಗೆ 55 ರೂ.ಗಿಂತ ಕಟ್ಟಿದರೆ ಸಾಕು, ನಿಮಗೆ ತಿಂಗಳಿಗೆ 3000 ರೂ ಸಿಗುತ್ತದೆ.