ಸೆಪ್ಟೆಂಬರ್ 12ರ ಬೆಳಗ್ಗೆ 11 ಗಂಟೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ http://karresults.nic.in ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ನಾಗೇಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಹೌದು, ಕಳೆದ ವರ್ಷ ನಡೆಸಿದ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗಾಗಿ ಆಗಸ್ಟ್ 12ರಿಂದ 25ರವರಗೆ ಈ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ ಸೈಟ್ http://karresults.nic.in ಮತ್ತು ಸಚಿವರ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸುತ್ತಿರಬಹುದು.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಸೆಪ್ಟೆಂಬರ್ 12ರಂದು ಪ್ರಕಟಿಸಲಾಗುತ್ತದೆ.
ಬೆಳಗ್ಗೆ 11 ಗಂಟೆ ನಂತರ ವೆಬ್ಸೈಟ್ನಲ್ಲಿ ಫಲಿತಾಂಶ ಲಭ್ಯವಾಗಲಿದೆ.https://t.co/KfXLW0iMAQ
— B.C Nagesh (@BCNagesh_bjp) September 8, 2022