ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು, ಇಂದು 28,264 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 68 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಇದೇ ಅವಧಿಯಲ್ಲಿ 29,244 ಜನರು ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 16.38% ಪಾಸಿಟಿವಿಟಿ ದರವಿದ್ದು, ರಾಜ್ಯಾದ್ಯಂತ 2,51,084 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ದೈನಂದಿನ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಿನ್ನೆ 33,337 ಕೇಸ್ ಪತ್ತೆಯಾಗಿದ್ದವು.
28,264 ಕೇಸ್: ಯಾವ ಜಿಲ್ಲೆಯಲ್ಲಿ, ಎಷ್ಟು?:
ಬಾಗಲಕೋಟೆ-338, ಬಳ್ಳಾರಿ-964, ಬೆಳಗಾವಿ-619, ಬೆಂ. ಗ್ರಾ.-453, ಬೆಂ.ನಗರ-11938, ಬೀದರ್-111, ಚಾಮರಾಜನಗರ-554, ಚಿಕ್ಕಬಳ್ಳಾಪುರ-334, ಚಿಕ್ಕಮಗಳೂರು-201, ಚಿತ್ರದುರ್ಗ-360, ದ. ಕನ್ನಡ-419, ದಾವಣಗೆರೆ-239, ಧಾರವಾಡ-1356, ಗದಗ-146, ಹಾಸನ-859, ಹಾವೇರಿ-409, ಕಲಬುರಗಿ-564, ಕೊಡಗು-633, ಕೋಲಾರ-422, ಕೊಪ್ಪಳ-321, ಮಂಡ್ಯ-953, ಮೈಸೂರು-2322, ರಾಯಚೂರು-306, ರಾಮನಗರ-246, ಶಿವಮೊಗ್ಗ-530, ತುಮಕೂರು-1165, ಉಡುಪಿ-441, ಉ. ಕನ್ನಡ-780, ವಿಜಯಪುರ-159, ಯಾದಗಿರಿ-122.
Daily cases continue to fall in Karnataka:
◾New cases in State: 28,264
◾New cases in B’lore: 11,938
◾Positivity rate in State: 16.38%
◾Discharges: 29,244
◾Active cases State: 2,51,084 (B’lore- 132k)
◾Deaths:68 (B’lore- 14)
◾Tests: 1,72,483#COVID19 #Omicron— Dr Sudhakar K (@mla_sudhakar) January 30, 2022