ರಾಜ್ಯದಲ್ಲಿ 264 ನೂತನ ಕೊರೋನಾ ಕೇಸ್; ಬಳ್ಳಾರಿ, ದಾವಣಗೆರೆ ಸೇರಿದಂತೆ 10 ಜಿಲ್ಲೆಗಳಲ್ಲಿ ‘ಶೂನ್ಯ’ ಪ್ರಕರಣ!

ಬೆಂಗಳೂರು: ರಾಜ್ಯದಲ್ಲಿ ಇಂದು 264 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 6 ಮಂದಿ ಸಾವನ್ನಪ್ಪಿದ್ದು, ಈ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ, ಈವರೆಗೆ ಪತ್ತೆಯಾದ ಕೊರೋನಾ ಪ್ರಕರಣಗಳ ಸಂಖ್ಯೆ…

coronavirus-update

ಬೆಂಗಳೂರು: ರಾಜ್ಯದಲ್ಲಿ ಇಂದು 264 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 6 ಮಂದಿ ಸಾವನ್ನಪ್ಪಿದ್ದು, ಈ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ, ಈವರೆಗೆ ಪತ್ತೆಯಾದ ಕೊರೋನಾ ಪ್ರಕರಣಗಳ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದ್ದು, ಈ ಪೈಕಿ 29,35,659 ಮಂದಿ ಚೇತರಿಸಿಕೊಂಡಿದ್ದಾರೆ.

ಇನ್ನು, ಕರೋನ ಸೋಂಕಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ 37,937 ಮಂದಿ ಕೊನೆಯುಸಿರೆಳೆದಿದ್ದು, ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 9,508 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಇಂದೇ 264 ಕೇಸ್: ಯಾವ ಜಿಲ್ಲೆಯಲ್ಲಿ, ಎಷ್ಟು?

Vijayaprabha Mobile App free

ಬಳ್ಳಾರಿ, ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ೧೦ ಜಿಲ್ಲೆಗಳಲ್ಲಿ ಯಾವುದೇ ಕರೋನ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರೋನ ಸೋಂಕಿತ ಪ್ರಕರಣ ಪಟ್ಟಿ ಈ ರೀತಿ ಇದೆ.

ಬೆಂಗಳೂರು ಗ್ರಾಮಾಂತರ-5, ಬೆಂಗಳೂರು ನಗರ-121, ಬೀದರ್-0, ಚಾಮರಾಜನಗರ-1, ದಕ್ಷಿಣ ಕನ್ನಡ-34, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-9, ಬಾಗಲಕೋಟೆ-0, ಬಳ್ಳಾರಿ-0, ಬೆಳಗಾವಿ-0, ಚಿತ್ರದುರ್ಗ-0, ದಾವಣಗೆರೆ-0, ಧಾರವಾಡ-0, ಗದಗ-0, ಹಾಸನ-16, ಹಾವೇರಿ-1, ಕಲಬುರಗಿ-1, ಕೊಡಗು-12, ಕೋಲಾರ-7, ಕೊಪ್ಪಳ-0, ಮಂಡ್ಯ-7, ಮೈಸೂರು-21, ರಾಯಚೂರು-1, ರಾಮನಗರ-2, ಶಿವಮೊಗ್ಗ-5, ತುಮಕೂರು-6, ಉಡುಪಿ-10, ಉ.ಕನ್ನಡ-3, ವಿಜಯಪುರ-0, ಯಾದಗಿರಿ-1.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.