ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು, ಇಂದು ಒಂದೇ ದಿನ ಬರೋಬ್ಬರಿ 25,005 ಹೊಸ ಕೇಸ್ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿಯೇ 18,374 ಕೇಸ್ ದೃಢಪಟ್ಟಿದ್ದು, ಪ್ರಸ್ತುತ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.12.39ರಷ್ಟಿದ್ದು, ಇಂದು ಸೋಂಕಿಗೆ 08 (B’lore- 03) ಜನ ಮೃತಪಟ್ಟಿರುವುದಾಗಿ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಇನ್ನು, ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಇಂದು 2,363 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಸದ್ಯ 1,15,733 ಸಕ್ರಿಯ ಪ್ರಕರಣಗಳಿವೆ.
25,005 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?
ಬಳ್ಳಾರಿ(ವಿಜಯನಗರ ಸೇರಿ)-185, ದಾವಣಗೆರೆ-92, ಕೊಪ್ಪಳ-32, ಚಿತ್ರದುರ್ಗ-78, ಬೆಂ.ಗ್ರಾ-390, ಬೆಂಗಳೂರು-18374, ಬಾಗಲಕೋಟೆ-5, ಬೀದರ್-97, ಚಾಮರಾಜನಗರ-176, ಚಿಕ್ಕಬಳ್ಳಾಪುರ-119, ಚಿಕ್ಕಮಗಳೂರು-90, ಬೆಳಗಾವಿ-276, ದ.ಕನ್ನಡ-625, ಧಾರವಾಡ-399, ಗದಗ-69, ಹಾಸನ-490, ಹಾವೇರಿ-19, ಕಲಬುರಗಿ-346, ಕೊಡಗು-72, ಕೋಲಾರ-293,ಮಂಡ್ಯ-406, ಮೈಸೂರು-695, ರಾಯಚೂರು-122, ರಾಮನಗರ-112, ಶಿವಮೊಗ್ಗ-212, ತುಮಕೂರು-547, ಉಡುಪಿ-379, ಉ.ಕನ್ನಡ-250, ವಿಜಯಪುರ-39, ಯಾದಗಿರಿ-16.