ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್: ರೈತ ಶಕ್ತಿ ಯೋಜನೆಯಡಿ 10 ಲೀಟರ್‌ ಡೀಸೆಲ್‌ಗೆ 225ರೂ

ರಾಜ್ಯ ಸರ್ಕಾರ ರೈತರಿಗಾಗಿ ‘ರೈತ ಶಕ್ತಿ’ ಹೆಸರಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಈ ಯೋಜನೆಯಡಿ ರೈತರು ಬಳಸುವ ಟ್ರ್ಯಾಕ್ಟರ್‌ಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. 1 ಎಕರೆಗೆ 10 ಲೀಟರ್‌ಗೆ ₹225ರಂತೆ ಐದು ಎಕರೆಗೆ ₹1,250…

farmer vijayaprabha news

ರಾಜ್ಯ ಸರ್ಕಾರ ರೈತರಿಗಾಗಿ ‘ರೈತ ಶಕ್ತಿ’ ಹೆಸರಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಈ ಯೋಜನೆಯಡಿ ರೈತರು ಬಳಸುವ ಟ್ರ್ಯಾಕ್ಟರ್‌ಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. 1 ಎಕರೆಗೆ 10 ಲೀಟರ್‌ಗೆ ₹225ರಂತೆ ಐದು ಎಕರೆಗೆ ₹1,250 ರೂ ಸಬ್ಸಿಡಿ ನೀಡಲಾಗುತ್ತಿದೆ. ಐದು ಎಕರೆವರೆಗೆ ಜಮೀನು ಹೊಂದಿರುವ ರೈತರಿಗಷ್ಟೆ ಇದು ಅನ್ವಯವಾಗಲಿದೆ ಎಂದು ಕೃಷಿ ಇಲಾಖೆಯ ಸಚಿವರಾದ ಬಿ.ಸಿ. ಪಾಟೀಲ್ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ರೈತರಿಗೆ ಡಿಸೇಲ್ ಗೆ ಸಹಾಯಧನ ನೀಡಲು ರೈತ ಶಕ್ತಿ ಯೋಜನೆಯನ್ನು ಮುಖ್ಯಮಂತ್ರಿಗಳು 2022-23 ರ ಬಜೆಟ್ ನಲ್ಲಿ ಘೋಷಿಸಿದ್ದು, ಈ ಯೋಜನೆಯಡಿ ಸೌಲಭ್ಯ ಪಡೆಯುವ ಯಾವುದೇ ರೈತರು ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ರೈತರು ಹೊಂದಿರುವ ಹಿಡುವಳಿ ಆಧಾರದ ಮೇಲೆ ಪ್ರತಿ ರೈತರಿಗೆ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ ಐದು ಎಕರೆಗೆ 1250 ರೂವರೆಗೆ ರೈತರಿಗೆ ಡೀಸೆಲ್ ಸಹಾಯಧನ ನೀಡಲಾಗುವುದು.

ಈ ಸೌಲಭ್ಯವನ್ನು ಪಡೆಯಲು ಪ್ರತಿಯೊಬ್ಬ ರೈತರು ಫ್ರೂಟ್ಸ್ ಐಡಿ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಾಯಾಗಿರಬೇಕಾಗಿದ್ದು, ಫ್ರೂಟ್ಸ್ ಪೋರ್ಟಲ್ ನಲ್ಲಿ ನಮೂದಿಸಿರುವ ಭೂ ಹಿಡುವಳಿ ಆಧಾರದ ಮೇಲೆ ಎಕರೆಗೆ 250 ರೂಪಾಯಿ ಗರಿಷ್ಠ 1250 ರೂಪಾಯಿಯವರೆಗೆ ಡೀಸೆಲ್ ಸಹಾಯಧನ ನೀಡಲಾಗುವುದು. ಫ್ರೂಟ್ಸ್ ಪೋರ್ಟಲ್ ನಲ್ಲಿ ರಾಜ್ಯದ ರೈತರು ಆಯಾ ಆಯಾ ಹೋಬಳಿಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗಿದ್ದು, ರೈತರು ಎಲ್ಲಾ ಭೂ ಹಿಡುವಳಿ ವಿವರ ಕಡ್ಡಾಯವಾಗಿ ಫ್ರೂಟ್ಸ್ ಪೋರ್ಟಲ್ ನಲ್ಲಿ ನೋಂದಣಿ, ಅಪಡೇಟ್ ಮಾಡುವುದು ಕಡ್ಡಾಯವಾಗಿದೆ.

Vijayaprabha Mobile App free

ಏನಿದು ಫ್ರೂಟ್ಸ್ ತಂತ್ರಾಂಶ?

ಕೃಷಿ, ಮೀನುಗಾರಿಕೆ, ರೇಷ್ಮೆ ಪಶುಸಂಗೋಪನೆ, ತೋಟಗಾರಿಕೆ ಇಲಾಖೆಯ ಯೋಜನೆಯಡಿ ರೈತರು, ಸರ್ಕಾರದಿಂದ ಸೌಲಭ್ಯ ಪಡೆಯಬೇಕಾದರೆ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಸಿದ ನಂತರ ರೈತರಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ನಂತೆ ಎಫ್ಐಡಿ ಸಂಖ್ಯೆ ನೀಡಲಾಗುವುದು.

ರೈತರು ಆನ್ಲೈನ್ ನಲ್ಲಿ ಫ್ರೂಟ್ಸ್ ಐಡಿ ನೋಂದಣಿ ಮಾಡುವುದು ಹೇಗೆ?

ರೈತರು ಆನ್ಲೈನ್ ನಲ್ಲಿ ತಮ್ಮ ಹೆಸರು ನೋಂದಣಿ ಮಾಡಡಲು https://fruits.karnataka.gov.in/OnlineUserRegistration.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಫ್ರೂಟ್ಸ್ ತಂತ್ರಾಂಶದ ಪೇಜ್ ಓಪನ್ ಆಗುತ್ತದೆ.

ಅದರಲ್ಲಿ ಆಧಾರ್ ಕಾರ್ಡ್ ನಂಬರ್, ಹೆಸರು ಭರ್ತಿ ಮಾಡಿ ವೆರಿಫೈ ಮೇಲೆ ಕ್ಲಿಕ್ ಮಾಡಿ ಟೇಕ್ ಮಿ ಟು ದ ಲಾಗಿನ್ ಪೇಜ್ ಮೇಲೆ ಕ್ಲಿಕ್ ಮಾಡಿಮಾಡಿದ ನಂತರ ಮೊಬೈಲಿಗೆ ಓಟಿಪಿಬರುತ್ತದೆ.

ಓಟಿಪಿ ನಮೂದಿಸಿ ಅಲ್ಲಿ ಕೇಳದಾಗ ಮಾಹಿತಿಗಳನ್ನು ಭರ್ತಿ ಮಾಡಿ ರೈತರು ತಮ್ಮಹೆಸರು ನೋಂದಣಿ ಮಾಡಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.