ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳಿಗೆ 12ನೇ ಕಂತಿನ 2,000 ರೂಪಾಯಿ ಮೊತ್ತವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಈ ಕುರಿತು ಅಧಿಕೃತ ದಿನಾಂಕ ಘೋಷಣೆಯಾಗಿಲ್ಲ. ಆದರೆ, ಬಹುತೇಕ ಆಗಸ್ಟ್ ಅಥವಾ ನವೆಂಬರ್ ತಿಂಗಳ ನಡುವೆ ಯಾವುದೇ ಸಮಯದಲ್ಲೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳ ಅರ್ಹರ ಖಾತೆಗಳಿಗೆ ಹಣ ಜಮೆ ಆಗಲಿದೆ.
ಅಲ್ಲದೇ, ಪಿಎಂ ಕಿಸಾನ್ ಯೋಜನೆ ಲಾಭ ಪಡೆಯಲು ಪೂರ್ಣಗೊಳಿಸಬೇಕಾಗಿದ್ದ E-KYC ಪ್ರಕ್ರಿಯೆಗೆ ಜುಲೈ 31 ಕೊನೆ ದಿನವಾಗಿತ್ತು. ಪಿಎಂ ಕಿಸಾನ್ ಯೋಜನೆ E-KYC ಪ್ರಕ್ರಿಯೆ ಪೂರ್ಣಗೊಳಿಸಿದ ಅರ್ಹ ಫಲಾನುಭವಿಗಳ ಖಾತೆಗಳಿಗೆ ಮಾತ್ರ ಹಣ ಜಮೆಯಾಗಲಿದ್ದು, E-KYC ಪೂರ್ಣಗೊಳಿಸದವರಿಗೆ ಹಣ ಜಮೆ ಆಗುವುದಿಲ್ಲ ಎನ್ನಲಾಗಿದೆ.
ಇನ್ನು, ಕೇಂದ್ರ ಸರ್ಕಾರ ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ ಮೂರೂ ಕಂತುಗಳಲ್ಲಿ 2,000 ರೂಪಾಯಿಯಂತೆ 6000 ರೂಪಾಯಿಗಳನ್ನು ಅರ್ಹ ರೈತರ ಖಾತೆಗೆ ಮಾಡುತ್ತದೆ.