ಕೇಂದ್ರ ಸರ್ಕಾರವು ರೈತರಿಗಾಗಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ 6,000 ರೂ.ಯಂತೆ ಮೂರು ಕಂತುಗಳಲ್ಲಿ 2,000 ರೂಗಳನ್ನೂ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಮೋದಿ ಸರ್ಕಾರ ಈಗಾಗಲೇ 7 ಕಂತುಗಳ ಹಣವನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದೆ. ಈಗ 8 ನೇ ಕಂತು ಹಣವನ್ನು ಒದಗಿಸಲು ಸಿದ್ಧವಾಗಿದೆ. ಮಾರ್ಚ್‌ನಲ್ಲಿ ಈ ಹಣ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ ಎಂದು ತಿಳಿದುಬಂದಿದೆ.
ಆದ್ದರಿಂದ ಫಲಾನುಭವಿಗಳ ಪಟ್ಟಿಯಲ್ಲಿದೆ (ಬೆನಿಫಿಸಿಯರಿ ಲಿಸ್ಟ್) ನಿಮ್ಮ ಹೆಸರು ಇದೆಯೋ, ಇಲ್ಲವೋ ಎಂದು ನೀವು ಪರಿಶೀಲಿಸಬೇಕಾಗಿದೆ. ಬೆನಿಫಿಸಿಯರಿ ಲಿಸ್ಟ್ ನಲ್ಲಿ ಹೆಸರು ಇಲ್ಲದಿದ್ದರೆ ಹಣ ಬರುವುದಿಲ್ಲ. ಲಿಸ್ಟ್ ನಲ್ಲಿ ಹೆಸರು ಇದ್ದರೆ ಹಣ ಬರುತ್ತದೆ. ಇದಕ್ಕಾಗಿ ನೀವು ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋಗಬೇಕಾಗಿದೆ. ಫಾರ್ಮರ್ಸ್ ಕಾರ್ನರ್ ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಫಲಾನುಭವಿಗಳ ಪಟ್ಟಿ ಆಯ್ಕೆಯನ್ನು ಆರಿಸಿ.
ಈಗ ನೀವು ನಿಮ್ಮ ರಾಜ್ಯ, ಜಿಲ್ಲೆ ಮತ್ತು ಪಟ್ಟಣದ ಹೆಸರನ್ನು ನಮೂದಿಸಿ, ಈಗ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಬಹುದು. ನೀವು ಇನ್ನೂ ಪಿಎಂ ಕಿಸಾನ್ ಯೋಜನೆಗೆ ಸೇರದಿದ್ದರೆ, ನೀವು ಈಗ ಕೂಡ ಆನ್‌ಲೈನ್‌ನಲ್ಲಿ ಯೋಜನೆಗೆ ಸೇರಬಹುದು. ನಿಮಗೆ ಬೇಕಾಗಿರುವುದು ನಿಮ್ಮ ಬ್ಯಾಂಕ್ ಖಾತೆ, ಹೊಲದ ಪಹಣಿ ಮತ್ತು ಆಧಾರ್ ಕಾರ್ಡ್ ಮಾತ್ರ.
ಇದನ್ನು ಓದಿ: ಮೋದಿ ಸರ್ಕಾರದಿಂದ 33 ಲಕ್ಷ ರೈತರ ಖಾತೆಗಳಿಂದ ಹಣ ವಾಪಾಸ್; ಹಾಗೆ ಮಾಡಿದವರ ವಿರುದ್ಧ ಪ್ರಕರಣಗಳು, ಬಂಧನ!