ಮೂರು ಕ್ವಿಂಟಾಲ್ ಈರುಳ್ಳಿ ಬೆಳೆದಿದ್ದ ಮಧ್ಯಪ್ರದೇಶದ ರೈತ ಜಯರಾಂ, ಅವುಗಳನ್ನು ಮಾರಾಟ ಮಾಡಲು ಶಾಜಾಪುರ ಮಾರುಕಟ್ಟೆ ಯಾರ್ಡ್ ಗೆ ಕೊಂಡೊಯ್ದಿದ್ದಾರೆ.
ಪ್ರತಿ ಚೀಲದಲ್ಲಿ 50KG ಯಂತೆ 6 ಚೀಲಗಳಲ್ಲಿ ಈರುಳ್ಳಿಯನ್ನು ಮಾರುಕಟ್ಟೆಗೆ ತಂದಿದ್ದಾರೆ. ಈರುಳ್ಳಿ ಮಾರಿದಾಗ ₹330 ಬಂದಿದೆ. ಅದರಲ್ಲಿ ಸಾರಿಗೆ ವೆಚ್ಚಕ್ಕೆ ₹280 & ಹಮಾಲಿ ವೆಚ್ಚಕ್ಕೆ ₹48 ತೆಗೆದು ₹2 ಕೈಸೇರಿದೆ. ಕಷ್ಟಪಟ್ಟು ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ₹2 ಸಿಗುತ್ತದೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.