ಕರ್ನಾಟಕದಲ್ಲಿ ಇನ್ನೂ 2 ದಿನ ಮಳೆ ಆರ್ಭಟ ಮುಂದುವರೆಯಲಿದ್ದು, ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ವಿವಿಧ ಭಾಗದಲ್ಲಿ ಇಂದಿನಿಂದ ಸೆ.11 ರವರೆಗೆ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಶಿವಮೊಗ್ಗ, ಬೆಳಗಾವಿ, ಬೀದರ್, ರಾಯಚೂರು ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಬಳ್ಳಾರಿ, ಬೆಂಗಳೂರು ನಗರ, ಚಾಮರಾಜನಗರ, ಹಾಸನ, ದಾವಣಗೆರೆ, ಮೈಸೂರು ಮಂಡ್ಯದಲ್ಲಿ ಸೆ 11 ರವರೆಗೆ ಹಳದಿ ಅಲರ್ಟ್ ಜಾರಿ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿವಿಧ ನಗರಗಳ ಹವಾಮಾನ ವರದಿ:
ಬೆಂಗಳೂರು: 27-20, ಮಂಗಳೂರು: 28-24, ಶಿವಮೊಗ್ಗ: 27-22, ಬೆಳಗಾವಿ: 27-22, ಮೈಸೂರು: 28-21, ಮಂಡ್ಯ: 28-21, ಕೊಡಗು: 22-18, ರಾಮನಗರ: 28-21, ಹಾಸನ: 24-19, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ: 27-20, ಕೋಲಾರ: 28-21, ತುಮಕೂರು: 27-21, ಉಡುಪಿ: 28-25, ಕಾರವಾರ: 28-25, ಚಿಕ್ಕಮಗಳೂರು: 23-19, ದಾವಣಗೆರೆ: 27-22, ಚಿತ್ರದುರ್ಗ: 27-21, ಹಾವೇರಿ: 27-22, ಬಳ್ಳಾರಿ: 29-23, ಗದಗ: 27-22, ಕೊಪ್ಪಳ: 28-23, ರಾಯಚೂರು: 29-23, ಯಾದಗಿರಿ: 27-22, ವಿಜಯಪುರ: 28-22, ಬೀದರ್: 26-21, ಕಲಬುರಗಿ: 27-22, ಬಾಗಲಕೋಟೆ: 28-23 ಡಿಗ್ರಿ ಸೆಲ್ಸಿಯಸ್ ಇರಲಿದೆ.