ಅಥಿತಿ ಉಪನ್ಯಾಸಕರಿಗೆ ಬಿಗ್ ಶಾಕ್ ನೀಡಿದ್ದು, ಅತಿಥಿ ಉಪನ್ಯಾಸಗಳಿಂದ ಗಳಿಸುವ ಆದಾಯಕ್ಕೆ ಶೇ.18ರಷ್ಟು ಜಿಎಸ್ಟಿ ಪಾವತಿಸಬೇಕಾಗುತ್ತದೆ ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಎಎಆರ್)ನ ಕರ್ನಾಟಕ ಪೀಠ ಆದೇಶಿದೆ.
ಹೌದು, ಈ ಬಗ್ಗೆ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಎಎಆರ್) ನಿಂದ ಸ್ಪಷ್ಟನೆ ಕೇಳಲಾಗಿತ್ತು. ಅತಿಥಿ ಉಪನ್ಯಾಸ ನೀಡಿ ಗಳಿಸುವ ಆದಾಯ ಕೂಡ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಇದು ಇತರ ವೃತ್ತಿಗಳು, ತಾಂತ್ರಿಕ ಮತ್ತು ವಾಣಿಜ್ಯ ಸೇವೆಗಳ ವರ್ಗದ ಅಡಿಯಲ್ಲಿ ಬರುತ್ತದೆ. ಹಾಗಾಗಿ, ಅದರ ಮೇಲೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ ಎಂದು ಎಎಆರ್ ತಿಳಿಸಿದೆ.
ಇದರಿಂದ ಅಥಿತಿ ಉಪನ್ಯಾಸಕರಿಗೆ ದೊಡ್ಡ ಹೊಡೆತ ಬಿದ್ದಿದ್ದು, ಅತಿಥಿ ಉಪನ್ಯದಿಂದ ತಾವು ಪಡೆದ ಸಂಬಳದಲ್ಲಿ 18% ತೆರಿಗೆ ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ.