ಅನ್ನದಾತರಿಗೆ ಸಿಹಿಸುದ್ದಿ: ಬೆಳೆಹಾನಿಗೆ 18.2 ಲಕ್ಷ ರೈತರ ಬ್ಯಾಂಕ್ ಖಾತೆ ಹಣ; ಯಾವ ಬೆಳೆಗೆ ಎಷ್ಟು ಪರಿಹಾರ ಗೊತ್ತಾ..?

ಬೆಂಗಳೂರು: ಬೆಳೆಹಾನಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಘೋಷಿಸಿದ್ದು, ಮುಂದಿನ 2-3 ದಿನದಲ್ಲಿ ಪರಿಹಾರ ಹಂಚಿಕೆ ಆರಂಭವಾಗಲಿದ್ದು, 18.2 ಲಕ್ಷ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಲಿದೆ. ಇನ್ನು, ಸಿಎಂ…

Farmers vijayaprabha news

ಬೆಂಗಳೂರು: ಬೆಳೆಹಾನಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಘೋಷಿಸಿದ್ದು, ಮುಂದಿನ 2-3 ದಿನದಲ್ಲಿ ಪರಿಹಾರ ಹಂಚಿಕೆ ಆರಂಭವಾಗಲಿದ್ದು, 18.2 ಲಕ್ಷ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಲಿದೆ.

ಇನ್ನು, ಸಿಎಂ ಬಸವರಾಜ್ ಬೊಮ್ಮಾಯಿ ಡಿಸೆಂಬರ್ 21ರಂದು ಪರಿಹಾರ ಹೆಚ್ಚಳದ ಭರವಸೆ ನೀಡಿದ್ದದ್ದು, ಇದಕ್ಕಾಗಿ 1200 ಕೋಟಿ ರೂ.ಹಣವನ್ನು ಸರ್ಕಾರ ಬಿಡುಗಡೆ ಮಾಡಲು ಮುಂದಾಗಿದೆ. ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ 14 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಪೈರು ಹಾನಿಯಿಂದಾಗಿ ರೈತರಿಗೆ ನಷ್ಟವಾಗಿತ್ತು.

ಯಾವ ಬೆಳೆಗೆ ಎಷ್ಟು ಪರಿಹಾರ?

Vijayaprabha Mobile App free

ಬೆಳೆಹಾನಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಘೋಷಿಸಿದ್ದು, ಯಾವ ಬೆಳೆಗೆ ಎಷ್ಟು ಪರಿಹಾರ ಎಂಬುದು ಇಲ್ಲಿದೆ.

  • ಒಣ ಬೇಸಾಯ ಭೂಮಿ (1 ಹೆಕ್ಟೇರ್)- 6800+ ಹೆಚ್ಚುವರಿ 6800= 13,600
  • ನೀರಾವರಿ ಜಮೀನು- 13,500 + 11,500= 25,000
  • ತೋಟಗಾರಿಕಾ ಬೆಳೆ- 18,000 + 10,000 = 28,000

ಇನ್ನು, 18.2 ಲಕ್ಷ ರೈತರಿಗೆ 1200 ಕೋಟಿ ರೂ. ನೇರವಾಗಿ ಬ್ಯಾಂಕ್ ಖಾತೆಗಳಿಗೆ 3 ದಿನದಲ್ಲಿ ಪಾವತಿಯಾಗಲಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳಂತೆ ಒಣ ಬೇಸಾಯ ಭೂಮಿಗೆ 6800 ರೂ, ನೀರಾವರಿ ಜಮೀನಿಗೆ 13,500 ರೂ, ತೋಟಗಾರಿಕೆ ಬೆಳೆಗೆ 18 ಸಾವಿರ ರೂ. ಸೇರಿ ಒಟ್ಟಾರೆ 1252 ಕೋಟಿ ರೂ. ಪರಿಹಾರ ಪಾವತಿಸಲಾಗಿತ್ತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.