pm kisan yojana: ಪಿಎಂ ಕಿಸಾನ್ ಯೋಜನೆಯ 16ನೇ ಕಂತಿಗಾಗಿ ಬಹಳ ದಿನಗಳಿಂದ ಕಾದು ಕುಳಿತಿರುವ ರೈತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಪಿಎಂ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತಿನ ಹಣದ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.
ಇದನ್ನು ಓದಿ: ನಿಮ್ಮ ಖಾತೆಗೆ ₹3,000.. ಈಗಲೇ ಚೆಕ್ ಮಾಡಿ
ಹೌದು, ಫೆ.28ರಂದು ಅಂದರೆ ಇಂದೇ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ 2,000 ರೂ. ಜಮಾ ಮಾಡಲಾಗುತ್ತದೆ. ಪ್ರಧಾನಿ ಮೋದಿ ಅವರು 16ನೇ ಕಂತಿನ ಹಣವನ್ನು DBT ಮೂಲಕ ದೇಶಾದ್ಯಂತ ರೈತರ ಖಾತೆಗಳಿಗೆ ವರ್ಗಾಯಿಸಲಿದ್ದಾರೆ.
ಈ ಯೋಜನೆಯಡಿ ಸರ್ಕಾರ ಒಟ್ಟು 21 ಸಾವಿರ ಕೋಟಿ ರೂ.ಗಳನ್ನು 9 ಕೋಟಿಗೂ ಹೆಚ್ಚು ರೈತ ಕುಟುಂಬಗಳ ಖಾತೆಗಳಿಗೆ ವರ್ಗಾಯಿಸಲಿದೆ. ಆದರೆ, ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಮಾತ್ರ ಈ ಹಣ ಸಿಗಲಿದೆ. ಈ ಹಣವನ್ನು ಪಡೆಯಲು, ರೈತರು ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಲು ಕೇಂದ್ರ ಸರ್ಕಾರ ಮನವಿ ಮಾಡಿದೆ.
ಇದನ್ನು ಓದಿ: RTCಗೆ ಆಧಾರ್ ಲಿಂಕ್ ಕಡ್ಡಾಯ: ಇಲ್ಲವಾದಲ್ಲಿ ಸಿಗೋದಿಲ್ಲ ಸರ್ಕಾರದ ಸೌಲಭ್ಯ..!
pm kisan yojana: ನಿಮ್ಮ ಹೆಸರು ಹೀಗೆ ಚೆಕ್ ಮಾಡಿ
- ಮೊದಲು ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಇಲ್ಲಿ ಬಲ ಬದಿಯಲ್ಲಿ ಫಾರ್ಮರ್ಸ್ ಕಾರ್ನರ್ ಆಯ್ಕೆ ಮಾಡಿ.
- ನಂತರ Beneficiary List ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮುಂದೆ ಹೊಸ ವಿಂಡೋ ತೆರೆಯುತ್ತದೆ. ಅದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ.
- Get Report ಮೇಲೆ ಕ್ಲಿಕ್ ಮಾಡಿ.
- ಆಗ ನಿಮ್ಮ ಗ್ರಾಮದ ಫಲಾನುಭವಿಗಳ ಸಂಪೂರ್ಣ ಲಿಸ್ಟ್ ನಿಮಗೆ ಸಿಗುತ್ತದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |