ಬೆಂಗಳೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿಗೆ 14 ಜಿಲ್ಲೆಗಳಿಗೆ ಅನುಮತಿ ನೀಡಿದ್ದು, ಶೇ. 30 ಕ್ಕಿಂತ ಹೆಚ್ಚಿನ ಹುದ್ದೆ ಖಾಲಿ ಇದ್ದ ಜಿಲ್ಲೆಗಳಲ್ಲಿ ನೇರ ನೇಮಕಾತಿ ಪ್ರಾರಂಭಿಸಲು ಡಿಸಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಹೌದು, ಕಂದಾಯ ಇಲಾಖೆಯ ಹುದ್ದೆಗಳ ಕುರಿತು ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ ಅವರು , ಕಂದಾಯ ಇಲಾಖೆಯಲ್ಲಿ ಮಂಜೂರಾದ 2,645 ಹುದ್ದೆಗಳಲ್ಲಿ 1,482 ಮಾತ್ರ ಭರ್ತಿಯಾಗಿದ್ದು, ಅಗತ್ಯವಿರುವ ಗ್ರೂಪ್ C ವೃಂದದ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.