ಧಾರವಾಡ: ಸಂಕ್ರಾಂತಿ ಹಬ್ಬದ ಪ್ರಯುಕ್ತ ದಾವಣಗೆರೆಯಿಂದ ಗೋವಾಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತದಲ್ಲಿ 10 ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಒಟ್ಟು 13 ಜನ ಸಾವನ್ನಪ್ಪಿರುವ ಘಟನೆ ಧಾರವಾಡದ ಜಿಲ್ಲೆಯ ಹೊರವಲಯದ ಇಟ್ಟಿಗಟ್ಟಿ ಬೈಪಾಸ್ ಬಳಿ ನಡೆದಿದೆ.
ದಾವಣಗೆರೆಯ ಲೇಡಿಸ್ ಕ್ಲಬ್ ನ ವತಿಯಿಂದ ಒಟ್ಟು 13 ಜನ ಮಹಿಳೆಯರು ಸಂಕ್ರಮಣ ಹಬ್ಬದ ಪ್ರಯುಕ್ತ ಗೋವಾಕ್ಕೆ ಹೊರಟಿದ್ದು, ಧಾರವಾಡದ ಜಿಲ್ಲೆಯ ಹೊರವಲಯದ ಇಟ್ಟಿಗಟ್ಟಿ ಬೈಪಾಸ್ ಬಳಿ ಬೆಳಗ್ಗೆ 3.30 ರ ಸುಮಾರಿಗೆ ಎದುರಿನಿಂದ ಬಂದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಡಾ .ವೀಣಾ ಪ್ರಕಾಶ್, ರಾಜೇಶ್ವರಿ, ಮಂಜುಳಾ ಎಂಬುವರು ಹಾಗು ಟಿಪ್ಪರ್ ಚಾಲಕ ಸೇರಿದಂತೆ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದು, ಒಟ್ಟು 13 ಜನ ಸಾವನ್ನಪ್ಪಿದ್ದಾರೇ ಎನ್ನಲಾಗಿದ್ದು, ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ಧಾಖಲಿಸಲಾಗಿದೆ.
ಈ ಭೀಕರ ಘಟನೆಯಿಂದ ಟಿಪ್ಪರ್ ಮತ್ತು ಟೆಂಪೂ ಟ್ರಾವೆಲರ್ ಸಂಪೂರ್ಣ ನುಜ್ಜುನುಜ್ಜಾಗಿದ್ದು, ಘಟನೆಯಲ್ಲಿ ಒಳಗೆ ಸಿಲಿಕಿದ್ದ ಮುತದೇಹಗಳನ್ನು ಪೋಲಿಸಲು ಮತ್ತು ಸ್ಥಳೀಯರು ಹೊರ ತೆಗೆದಿದ್ದಾರೆ.