ಬೆಂಗಳೂರು: ರಾಜ್ಯಕ್ಕೆ ಕೊರೋನಾ ಭಾರೀ ಆಘಾತ ನೀಡಿದ್ದು, ಇಂದು ಒಂದೇ ದಿನ 11,698 ಹೊಸ ಕೇಸ್ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿಯೇ 9,221 ಕೇಸ್ ದೃಢಪಟ್ಟಿದ್ದು, ಪ್ರಸ್ತುತ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.7.77ರಷ್ಟಿದ್ದು, ಇಂದು ಸೋಂಕಿಗೆ ನಾಲ್ವರು ಮೃತಪಟ್ಟಿರುವುದಾಗಿ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಇಂದು 1,148 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಸದ್ಯ 60,148 ಸಕ್ರಿಯ ಪ್ರಕರಣಗಳಿವೆ.
ಒಮಿಕ್ರಾನ್ ಸ್ಪೋಟ:
ಇನ್ನು, ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ, ಒಮಿಕ್ರಾನ್ ಸಹ ಹೆಚ್ಚಳವಾಗುತ್ತಿದ್ದು, ಇಂದು ಒಂದೇ ದಿನ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 146 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಕರ್ನಾಟಕದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 479ಕ್ಕೆ ತಲುಪಿದ್ದು, ನಿನ್ನೆ ರಾಜ್ಯದಲ್ಲಿ 12,000 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು.
Positivity rate goes up to 7.77% in Karnataka today:
◾New cases in State: 11,698
◾New cases in B’lore: 9,221
◾Positivity rate in State: 7.77%
◾Discharges: 1,148
◾Active cases State: 60,148 (B’lore- 49k)
◾Deaths:04 (B’lore- 02)
◾Tests: 1,50,479#COVID19 #Omicron— Dr Sudhakar K (@mla_sudhakar) January 10, 2022