ಜ್ವರಕ್ಕೆ ಬಳಸುವ ಡೋಲೋ-650 ಮಾತ್ರೆಯನ್ನು ರೋಗಿಗಳಿಗೆ ಶಿಫಾರಸು ಮಾಡಲು ವೈದ್ಯರಿಗೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿಯ ಉಚಿತ ಕೊಡುಗೆಗಳನ್ನು ಮಾತ್ರೆ ಉತ್ಪಾದಿಸುವ ಕಂಪನಿ ನೀಡಿದೆ.
ಈ ಕುರಿತು ನೇರ ತೆರಿಗೆ ಕೇಂದ್ರ ಮಂಡಳಿ ಆರೋಪಿಸಿರುವುದಾಗಿ ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಕೋವಿಡ್ ಬಂದಾಗ ಈ ಮಾತ್ರೆಯನ್ನು ಹೆಚ್ಚಾಗಿ ಬಳಸುವಂತೆ ಶಿಫಾರಸು ಮಾಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಗಂಭೀರವಾದ ಈ ವಿಷಯಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದ್ದು, ‘ಕೋವಿಡ್ ಅವಧಿಯಲ್ಲಿ ಈ ಮಾತ್ರೆಯನ್ನು ತೆಗೆದುಕೊಳ್ಳುವಂತೆ ನನಗೂ ತಿಳಿಸಲಾಗಿತ್ತು. ಆದರೂ, ವೈದ್ಯರುಗಳಿಗೆ 1000 ಕೋಟಿ ವೆಚ್ಚ ಮಾಡಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಅಭಿಪ್ರಾಯಪಟ್ಟರು.