ರೈಲ್ವೆ ಭದ್ರತಾ ಇಲಾಖೆಯಲ್ಲಿ ಮಂಜೂರಾಗಿರುವ ಹತ್ತು ಲಕ್ಷ ಹುದ್ದೆಗಳ ಪೈಕಿ 1.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಇಲಾಖೆ ತಿಳಿಸಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಹಾಕಿರುವ ಅರ್ಜಿಗೆ ಪ್ರತಿಕ್ರಿಯಿಸಿ, ಸುರಕ್ಷತಾ ವಿಭಾಗದಲ್ಲಿ 10,00,941 ಲಕ್ಷ ಹುದ್ದೆಗಳು ಮಂಜೂರಾಗಿವೆ, ಮಾರ್ಚ್ ಅಂತ್ಯಕ್ಕೆ 8,48,207 ಹುದ್ದೆಗಳು ಭರ್ತಿಯಾಗಿದ್ದು, 1,52,734 ಹುದ್ದೆಗಳು ಖಾಲಿ ಇವೆ ಎಂದು ಸಚಿವಾಲಯ ಹೇಳಿದೆ. ಸಿಬ್ಬಂದಿ ಕೊರತೆಯಿದ್ದರೂ ಸುರಕ್ಷತೆಗಾಗಿ ಗಮನಾರ್ಹ ಬಂಡವಾಳ ಹೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಲ್ಲಿ 14,429 ಲೋಕೋ ಪೈಲಟ್ ಮತ್ತು 4,337 ಸಹಾಯಕ ಚಾಲಕ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಅಲ್ಲದೆ, ರೈಲ್ವೆ ಸುರಕ್ಷತಾ ಯೋಜನೆಗಳಿಗಾಗಿ 2004-14ರ ನಡುವೆ ₹70 ಸಾವಿರ ಕೋಟಿಯಿಂದ 2014-24ರ ಅವಧಿಯಲ್ಲಿ ₹1.78 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ರಾಮ ಮಂದಿರದಲ್ಲಿ ಗುಂಡಿನ ದಾಳಿ- ಕರ್ತವ್ಯನಿರತ ಎಸ್ಎಸ್ಎಫ್ ಯೋಧ ಮೃತ್ಯು
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |