RBI Recruitment 2026 : ಬ್ಯಾಂಕ್ ಉದ್ಯೋಗಕ್ಕಾಗಿ (Bank Jobs) ಕಾಯುತ್ತಿರುವ ನಿರುದ್ಯೋಗಿ ಯುವಜನತೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಭರ್ಜರಿ ಸಿಹಿಸುದ್ದಿ ನೀಡಿದ್ದು, ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 650 ಅಸಿಸ್ಟೆಂಟ್ (Assistant) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಬ್ಯಾಂಕ್‌ನಲ್ಲಿ ಕೆಲಸ ಮಾಡುವುದು ಹಲವರ ಕನಸಾಗಿದ್ದು, ಉತ್ತಮ ಸಂಬಳದ ಜೊತೆಗೆ ಭದ್ರವಾದ ವೃತ್ತಿಜೀವನ ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ ಯಾವುದೇ ಪದವಿ (Degree) ಪೂರ್ಣಗೊಳಿಸಿರಬೇಕಾಗಿದ್ದು, SC/ST ಅಭ್ಯರ್ಥಿಗಳು ಕೇವಲ ಪಾಸ್ ಆಗಿದ್ದರೆ ಸಾಕು.
ವಯೋಮಿತಿ: ಫೆಬ್ರವರಿ 1, 2026 ರ ಅನ್ವಯ ಅಭ್ಯರ್ಥಿಗಳ ವಯಸ್ಸು 20 ರಿಂದ 28 ವರ್ಷಗಳ ಒಳಗಿರಬೇಕು.
ವಯೋಮಿತಿ ಸಡಿಲಿಕೆ: ನಿಯಮಗಳ ಪ್ರಕಾರ SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇರುತ್ತದೆ.
ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಅಗ್ನಿವೀರ್ ನೇಮಕಾತಿ 2026: 25,000+ ಹುದ್ದೆಗಳಿಗೆ ಅರ್ಜಿ ಆಹ್ವಾನ
ವೇತನ ಮತ್ತು ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
ಆಯ್ಕೆ ವಿಧಾನ: ಇನ್ನು, ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ (Prelims), ಮುಖ್ಯ ಪರೀಕ್ಷೆ (Mains) ಮತ್ತು ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT) ಮೂಲಕ ಆಯ್ಕೆ ಮಾಡಲಾಗುತ್ತದೆ.
ಭರ್ಜರಿ ಸಂಬಳ: ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂಲ ವೇತನ ಮತ್ತು ಇತರ ಭತ್ಯೆಗಳು ಸೇರಿ ತಿಂಗಳಿಗೆ ಅಂದಾಜು ₹58,514 ಸಂಬಳ ಸಿಗಲಿದೆ.
ಇದನ್ನೂ ಓದಿ: HAL Recruitment 2026 | ತಿಂಗಳಿಗೆ ₹23,000 ಸಂಬಳ! ಟೆಕ್ನಿಷಿಯನ್, ಫೈರ್‌ಮ್ಯಾನ್ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ
ಪ್ರಮುಖ ದಿನಾಂಕಗಳು & ಅರ್ಜಿ ಶುಲ್ಕ
ಅರ್ಜಿ ಸಲ್ಲಿಕೆ ಆರಂಭ: ಫೆಬ್ರವರಿ 16, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 8, 2026
ಪ್ರಾಥಮಿಕ ಪರೀಕ್ಷೆ (Prelims): ಏಪ್ರಿಲ್ 11, 2026
ಮುಖ್ಯ ಪರೀಕ್ಷೆ (Mains): ಜೂನ್ 7, 2026
ಅರ್ಜಿ ಶುಲ್ಕ: ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ₹450. SC/ST ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಕೇವಲ ₹50.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆರ್‌ಬಿಐನ ಅಧಿಕೃತ ವೆಬ್‌ಸೈಟ್ https://rbi.org.in/ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.




