ಶಿವಮೊಗ್ಗ: ಕರ್ನಾಟಕದ ಪ್ರತಿಷ್ಠಿತ ಹಾಲು ಒಕ್ಕೂಟವಾದ ‘ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ’ (SHIMUL) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 194 ಸಹಾಯಕ ವ್ಯವಸ್ಥಾಪಕ (Assistant Manager) ಮತ್ತು ಇತರೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಸಂಪೂರ್ಣ ವಿವರ, ಸಂಬಳ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಮಾಹಿತಿ ಇಲ್ಲಿದೆ.
💼 ಹುದ್ದೆಯ ವಿವರಗಳು (Job Details)
ಸಂಸ್ಥೆ: KMF SHIMUL (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಒಕ್ಕೂಟ).
ಒಟ್ಟು ಹುದ್ದೆಗಳು: 194.
ಹುದ್ದೆಗಳ ಹೆಸರು: ಸಹಾಯಕ ವ್ಯವಸ್ಥಾಪಕರು (Assistant Manager), ಜೂನಿಯರ್ ಟೆಕ್ನಿಷಿಯನ್.
ಕೆಲಸದ ಸ್ಥಳ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳು.
💰 ಭರ್ಜರಿ ವೇತನ (Salary Package)
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಪ್ರತಿ ತಿಂಗಳು ₹34,100 ರಿಂದ ಆರಂಭವಾಗಿ ₹1,55,200 ರವರೆಗೆ ಆಕರ್ಷಕ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಇದರೊಂದಿಗೆ ಇತರೆ ಭತ್ಯೆಗಳೂ ಸಿಗಲಿವೆ.
👨🎓 ವಯೋಮಿತಿ ಮತ್ತು ಅರ್ಹತೆ (Age Limit)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು 35 ವರ್ಷ ಮೀಿರರಬಾರದು.
ವಯೋಮಿತಿ ಸಡಿಲಿಕೆ:
2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ.
SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ: 5 ವರ್ಷ.
📝 ಆಯ್ಕೆ ಪ್ರಕ್ರಿಯೆ ಹೇಗೆ? (Selection Process)
ಲಿಖಿತ ಪರೀಕ್ಷೆ (Written Test).
ಮೆರಿಟ್ ಪಟ್ಟಿ (Merit List).
ಮೌಖಿಕ ಸಂದರ್ಶನ (Interview).
💸 ಅರ್ಜಿ ಶುಲ್ಕ (Application Fee)
SC/ST/Cat-I/PWD ಅಭ್ಯರ್ಥಿಗಳಿಗೆ: ₹500/-
ಸಾಮಾನ್ಯ ಮತ್ತು ಇತರೆ ವರ್ಗದವರಿಗೆ: ₹1,000/-
📅 ಪ್ರಮುಖ ದಿನಾಂಕಗಳು (Important Dates)
ಈ ಹಿಂದೆ ಅರ್ಜಿ ಸಲ್ಲಿಸಲು ದಿನಾಂಕ ಮುಗಿದಿತ್ತು, ಆದರೆ ಈಗ ಕೆಎಂಎಫ್ ದಿನಾಂಕವನ್ನು ವಿಸ್ತರಣೆ ಮಾಡಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-02-2026 (ಫೆಬ್ರವರಿ 21).
💻 ಅರ್ಜಿ ಸಲ್ಲಿಸುವುದು ಹೇಗೆ?
ಕೆಎಂಎಫ್ ಶಿಮುಲ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
“Recruitment 2025-26” ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಬಳಸಿ ರಿಜಿಸ್ಟರ್ ಆಗಿ.
ಅಗತ್ಯ ದಾಖಲೆಗಳು ಮತ್ತು ಫೋಟೋ ಅಪ್‌ಲೋಡ್ ಮಾಡಿ.
ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ, “Submit” ಕೊಡಿ.
ಕೆಎಂಎಫ್ ಶಿಮುಲ್ ಅಧಿಸೂಚನೆ ಪ್ರಮುಖ ಲಿಂಕ್‌ಗಳು
ವಿಸ್ತೃತ ಮತ್ತು ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: shimul.coop




