ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ಹುದ್ದೆಗೆ ನೇಮಕಾತಿ ಪ್ರಕಟಿಸಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನ ಕೇಂದ್ರ ಕಚೇರಿಯಿಂದ ಈ ಅಧಿಸೂಚನೆ ಹೊರಬಂದಿದ್ದು, ಕರ್ನಾಟಕ ಅರಣ್ಯ ಇಲಾಖೆ ಅಧೀನದಲ್ಲಿರುವ KFWCCF ಅಡಿಯಲ್ಲಿ ಈ ನೇಮಕಾತಿ ನಡೆಯಲಿದೆ.
ಇದನ್ನು ಓದಿ: RBI Recruitment 2026: ಡಿಗ್ರಿ ಆಗಿದ್ರೂ ಸಾಕು, ಆರ್ಬಿಐ (RBI) ನಲ್ಲಿ ಭರ್ಜರಿ ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ
ಹುದ್ದೆಯ ವಿವರಗಳು

- ಹುದ್ದೆ: ಸಾರ್ವಜನಿಕ ಸಂಪರ್ಕಾಧಿಕಾರಿ (PRO)
- ಸಂಸ್ಥೆ : KFWCCF
- ನೇಮಕಾತಿ ಪ್ರಕಾರ: ಒಪ್ಪಂದ ಆಧಾರಿತ
- ಅವಧಿ: 2 ವರ್ಷ
- ಸ್ಥಳ: ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು
ಅರ್ಹತೆ & ಅನುಭವ
ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಧ್ಯಮ ಸಂಪರ್ಕ, ಪ್ರಕಟಣೆ ರಚನೆ, ಸಂಸ್ಥೆಯ ಸಂವಹನ ತಂತ್ರ ರೂಪಿಸುವ ಸಾಮರ್ಥ್ಯ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: http://kfwccf.in PRO ಹುದ್ದೆಗೆ ಸ೦ಬ೦ಧಿಸಿದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ. ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿ. ಅರ್ಜಿಯ ಕೊನೆಯ ದಿನಾಂಕ: ಫೆಬ್ರವರಿ 25
ಏಕೆ ಈ ಅವಕಾಶ ವಿಶೇಷ?
ಅರಣ್ಯ ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ವೇದಿಕೆ. ಪರಿಸರ ಜಾಗೃತಿ, ಹವಾಮಾನ ಬದಲಾವಣೆ ಕುರಿತ ಮಾಹಿತಿ ಪ್ರಸಾರ ಮತ್ತು ಅರಣ್ಯ ಸಂಪತ್ತಿನ ರಕ್ಷಣೆ ಸಂಬಂಧಿತ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುವ ಅವಕಾಶ PRO ಹುದ್ದೆ ಮೂಲಕ ಲಭ್ಯವಾಗುತ್ತದೆ.




