Indian Railways : ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ (Indian Railways) ಶುಭ ಸುದ್ದಿ. ದೇಶಾದ್ಯಂತ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಮೂಲಕ ಒಟ್ಟು 2418 ಅಪ್ರೆಂಟಿಸ್ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ. ಯಾವುದೇ ಪರೀಕ್ಷೆಯಿಲ್ಲದೆ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತಿದ್ದು, ಹುದ್ದೆಗಳ ಸಂಖ್ಯೆ, ಅರ್ಹತೆ ಇತ್ಯಾದಿ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.
ಸೆಪ್ಟೆಂಬರ್ 11, 2025 ರವರೆಗೆ ಅವಕಾಶ
2,418 ಅಪ್ರೆಂಟಿಸ್ ಹುದ್ದೆಗಳನ್ನು ಕೇಂದ್ರ ರೈಲ್ವೆಯ ಅಡಿಯಲ್ಲಿ ವಿವಿಧ ಕಾರ್ಯಾಗಾರಗಳು & ಘಟಕಗಳಲ್ಲಿ ಟ್ರೇಡ್‌ಗಳಲ್ಲಿ ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆ ಆಗಸ್ಟ್ 12 ರಂದು ಪ್ರಾರಂಭವಾಗಿದ್ದು, ಸೆಪ್ಟೆಂಬರ್ 11, 2025 ರವರೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳು ಪುಣೆ ಕ್ಲಸ್ಟರ್
- ಕ್ಯಾರೇಜ್ & ವ್ಯಾಗನ್ ಡಿಪೋ- 31
- ಡೀಸೆಲ್ ಲೋಕೋ ಶೆಡ್- 121
- ಎಲೆಕ್ನಿಕ್ ಲೋಕೋ ಶೆಡ್, ಡ್ಯಾಂಡ್- 40
- ನಾಗುರ, ಸೋಲಾಪುರ ಕ್ಲಸ್ಟರ್
- ಎಲೆಕ್ಟಿಕ್ ಲೋಕೋ ಶೆಡ್, ಅಜ್ಜಿ- 48
- ಕ್ಯಾರೇಜ್ & ವ್ಯಾಗನ್ ಡಿಪೋ- 63
- MELPL AJSI-33
- ಕ್ಯಾರೇಜ್ & ವ್ಯಾಗನ್ ಡಿಪೋ- 55
- ಕುರ್ದುವಾಡಿ ಕಾರ್ಯಾಗಾರ – 21
ಮುಂಬೈ ಕ್ಲಸ್ಟರ್‌ನಲ್ಲಿ ಖಾಲಿ ಹುದ್ದೆಗಳು
- ಕ್ಯಾರೇಜ್ & ವ್ಯಾಗನ್ – 258 ಹುದ್ದೆಗಳು
- ಕಲ್ಯಾಣ್ ಡೀಸೆಲ್ ಶೆಡ್- 50 ಹುದ್ದೆಗಳು
- ಕುರ್ಲಾ ಡೀಸೆಲ್ ಶೆಡ್- 60 ಹುದ್ದೆಗಳು
- ಸೀನಿಯರ್ ಡಿಇಇ (TRS) ಕಲ್ಯಾಣ್- 124 ಹುದ್ದೆಗಳು
- ಸೀನಿಯರ್ ಡಿಇಇ (TRS) ಕುರ್ಲಾ- 180 ಹುದ್ದೆಗಳು
- ಪ್ಯಾರೆಲ್ ಕಾರ್ಯಾಗಾರ- 303 ಹುದ್ದೆಗಳು
- ಮಾತುಂಗ ಕಾರ್ಯಾಗಾರ- 547 ಹುದ್ದೆಗಳು
- ಎಸ್ & ಟಿ ಕಾರ್ಯಾಗಾರ, ಬೈಕುಲ್ಲಾ- 60 ಹುದ್ದೆಗಳು
ಭೂಸಾವಲ್ ಕ್ಲಸ್ಟರ್‌ನಲ್ಲಿ ಖಾಲಿ ಹುದ್ದೆಗಳು
- ಕ್ಯಾರೇಜ್ & ವ್ಯಾಗನ್ ಡಿಪೋ- 122
- ಎಲೆಕ್ಟಿಕ್ ಲೋಕೋ ಶೆಡ್, ಭೂಸಾವಲ್- 80
- ಎಲೆಕ್ಟಿಕ್ ಲೋಕೋಮೋಟಿವ್ ಕಾರ್ಯಾಗಾರ – 118
- ಮನ್ಮಾಡ್ ಕಾರ್ಯಾಗಾರ – 51
- ಟಿಎಂಡಬ್ಲ್ಯೂ ನಾಸಿಕ್ ರಸ್ತೆ- 47
ವಯಸ್ಸು, ಶೈಕ್ಷಣಿಕ ಅರ್ಹತೆ
ಸ೦ಬ೦ಧಿತ ವಿಭಾಗದಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ 10 ನೇ ತರಗತಿ ಅಥವಾ ಐಟಿಐ ಉತ್ತೀರ್ಣರಾಗಿರಬೇಕು. ವಯಸ್ಸು, ಆಗಸ್ಟ್ 12, 2025 ರಂತೆ 15 ರಿಂದ 24 ವರ್ಷಗಳ ನಡುವೆ ಇರಬೇಕು. SC/ST ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯಿದೆ.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. 10 ನೇ ತರಗತಿಯಲ್ಲಿ ಪಡೆದ ಅಂಕಗಳು & ITI ನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ಈ ಎರಡರಲ್ಲಿ ಪಡೆದ ಅಂಕಗಳ ಸರಾಸರಿಯನ್ನು ತೆಗೆದುಕೊಂಡು ಅಂತಿಮ ಪಟ್ಟಿಯನ್ನು ತಯಾರಿಸಲಾಗುತ್ತದೆ.
ಅರ್ಜಿ ಪ್ರಕ್ರಿಯೆ
- ಅಧಿಕೃತ ವೆಬ್‌ಸೈಟ್ rrcer.com ಗೆ ಭೇಟಿ ನೀಡಿ,
- ನೋಂದಾಯಿಸದ ಅರ್ಜಿ ನಮೂನೆಯಲ್ಲಿ ನಿಮ್ಮ
- ವೈಯಕ್ತಿಕ & ಶೈಕ್ಷಣಿಕ ವಿವರಗಳನ್ನು ನಮೂದಿಸಬೇಕು.
- ನಂತರ ಶೈಕ್ಷಣಿಕ ಅರ್ಹತೆಗಳಿಗೆ ಸ೦ಬ೦ಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.




