ಹಾಸನ: ರೈತರು ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ವಕ್ಫ್ ಬೋರ್ಡ್ ಕಿತಾಪತಿಗೆ ಸಚಿವ ಜಮೀರ್ ಅಹಮದ್ ಕುಮ್ಮಕ್ಕು ನೀಡುತ್ತಿದ್ದಾರೆ. ಹಾಗಾಗಿ ಜಮೀರ್ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬಿಜೆಪಿ ವಿತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಹಾಸನಾಂಬೆ ದರ್ಶನ ಪಡೆದ ನಂತರ ಮಾಧ್ಯದೊಮದೊಂದಿಗೆ ಮಾತನಾಡಿ, ಇವತ್ತು ಬೇಲಿನೆ ಎದ್ದು ಹೊಲ ಮೆದಂತೆ ಆಗಿದೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಸಚಿವರಿಂದ ಆಗುತ್ತಿದೆ. ಹಲವಾರು ದಶಕಗಳಿಂದ ರೈತರು ಉಳುಮೆ ಮಾಡುತ್ತಿದ್ದು, ಇದನ್ನು ವಕ್ಫ್ ಬೋರ್ಡ್ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಇದಕ್ಕೆ ಕುಮಕ್ಕು ಕೊಡುವ ಕೆಲಸ ಜಮೀರ್ ಅಹಮದ್ ಮಾಡುತ್ತಿರುವುದು ದುರದೃಷ್ಠಕರ. ತಕ್ಷಣ ಇದನ್ನ ಸುಧಾರಿಸದೇ ಹೋದರೇ ನೀವು ಹೆಚ್ಚಿರುವ ಕಿಡಿಯಿಂದ ರಾಜ್ಯಾಧ್ಯಂತ ಬೆಂಕಿ ಹಚ್ಚಿಕೊಳ್ಳುತ್ತದೆ. ಅದನ್ನ ಆರಿಸಲು ಸಾಧ್ಯವಾಗುವುದಿಲ್ಲ ಈ ಸರಕಾರಕ್ಕೆ ಎಂದು ಎಚ್ಚರಿಸಿದರು.
ಇಂತಹ ಕಿಡಿ ಹಚ್ಚುವ ಕೆಲಸ ಬಿಟ್ಟು ದೇವರು ಮೆಚ್ಚುವ ಕೆಲಸ ಮಾಡಿದರೇ ಒಳ್ಳೆಯದು. ವಕ್ಫ್್ ಕಿತಾಪತಿ ಶುರು ಮಾಡಿರುವ ಜಿಲ್ಲೆಗಳಿಗೆ ಎಷ್ಟು ರೈತರ ಭೂಮಿ ಕಬಳಿಸಲು ಯತ್ನಿಸಲಾಗುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಲು ನಮ್ಮ ತಂಡ ಹೋಗಿದ್ದು, ವರದಿ ಕೊಡಲಿದೆ. ಮುಂದೆ ಯಾವ ಹೋರಾಟ ಮಾಡಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಯಲಿದೆ ಎಂದರು.