(Stickers) ವಾಹನ ಸವಾರರಿಗೆ ಹಲವು ನಿಯಮಗಳು ಜಾರಿಗೆ ತಂದಿದ್ದು, ಅದರಲ್ಲಿ ಇದೀಗ ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಚ್ಚರಿಕೆ ಒಂದನ್ನು ನೀಡಿದ್ದಾರೆ.
ಹೌದು, ಇನ್ಮುಂದೆ ವಾಹನಗಳಲ್ಲಿ ಸ್ಟಿಕರ್ ಗಳನ್ನು (Stickers) ಹಾಕಿಸುವಂತಿಲ್ಲ. ಒಂದು ವೇಳೆ ಹಾಕಿಸಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಿ. ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದ್ದಾರೆ.
ಈ ಮೊದಲೇ ಸಾರಿಗೆ ಇಲಾಖೆಯ ಸಂಚಾರಿ ನಿಯಮಗಳ ಪ್ರಕಾರ ಈ ರೀತಿಯ ಸ್ಟಿಕರ್ (Stickers) ಅಳವಡಿಕೆಗೆ ನಿಷೇಧವಿತ್ತಾದರೂ, ವಾಹನಗಳ ಮೇಲೆ ನಾನಾ ರೀತಿಯ ಸಿನಮಾ ನಟ ನಟಿಯರ ಹೆಸರು ಸ್ಟಿಕರ್ ಮಾಡಿಸುವುದು ಸಾಮಾನ್ಯವಾಗಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಅಭಿಮಾನಿಗಳು ವಾಹನಗಳ ಮೇಲೆ ಕೈದಿ ನಂಬರ್ 511 ಎಂದು ಸ್ಟಿಕರ್ ಅಂಟಿಸಿ ಹುಚ್ಚಾಟಗಳನ್ನು ಮೆರೆದಿದ್ದರು. ಇದಕ್ಕೆಲ್ಲ ಬ್ರೇಕ್ ಹಾಕುವ ಉದ್ದೇಶದಿಂದ ಸಾರಿಗೆ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಇನ್ಮುಂದೆ ವಾಹನಗಳ ಮೇಲೆ ಈ ರೀತಿಯ ಸ್ಟಿಕರ್ ಕಂಡು ಬಂದಲ್ಲಿ ದಂಡ ವಿಧಿಸುವುದರ ಜೊತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಿ. ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದ್ದಾರೆ.