Rajinikanth Coolie movie: ತಮಿಳು ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ತಯಾರಾಗುತ್ತಿರುವ 171ನೇ ಸಿನಿಮಾ ‘ಕೂಲಿ’ ಚಿತ್ರತಂಡ ಮತ್ತೊಂದು ಅಪ್ಡೇಟ್ ನೀಡಿದೆ.
ಹೌದು, ಇದರಲ್ಲಿ ರಜನಿ ಪಾತ್ರಕ್ಕೆ ‘ದೇವ’ ಎಂದು ಹೆಸರಿಟ್ಟಿದ್ದಾರೆ. ತನ್ನ ಕೈಯಲ್ಲಿ ಕೂಲಿ ನಂಬರ್ ಇರುವ ಫೋಟೋವನ್ನು ಚಿತ್ರತಂಡ ರಿವೀಲ್ ಮಾಡಿದೆ. ಈ ಸಿನಿಮಾದಲ್ಲಿ ನಾಗಾರ್ಜುನ, ಸತ್ಯರಾಜ್, ಶೃತಿಹಾಸನ್, ಉಪೇಂದ್ರ ಸೇರಿದಂತೆ ಮುಂತಾದವರ ಪಾತ್ರಗಳು ಈಗಾಗಲೇ ರಿವೀಲ್ ಆಗಿರುವುದು ಗೊತ್ತೇ ಇದೆ.
ನಟ ಉಪೇಂದ್ರ ಕಲೀಷ ಲುಕ್ ಗೆ ಫ್ಯಾನ್ಸ್ ಫುಲ್ ಖುಷ್!!
ತಮಿಳ್ ಸ್ಟಾರ್ ನಟ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಈ ಕುರಿತು ಉಪೇಂದ್ರ ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.
ಉಪೇಂದ್ರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕುವ ಮೂಲಕ ಕೂಲಿ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಉಪೇಂದ್ರ ಕಲೀಷ ಎಂಬ ಪಾತ್ರಕ್ಕೆ ಬಣ್ಣ ಹಚ್ಚಲಿದ್ದು ಪೋಸ್ಟರ್ ಭಾರೀ ವೈರಲ್ ಆಗಿದೆ.
https://vijayaprabha.com/heavy-rain-in-many-parts-of-the-state-2/