ತುಳಸಿ ದೇಹವನ್ನು ರೋಗಗಳಿಂದ ಮುಕ್ತವಾಗಿಡುವಲ್ಲಿ ದಿವ್ಯಔಷಧ

ತುಳಸಿ ಇಡೀ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ಔಷಧೀಯ ಗುಣಗಳು ಅಡಗಿವೆ. ನಿತ್ಯ 5-7 ತುಳಸಿ ಎಲೆಗಳನ್ನು ನಿತ್ಯ ಸೇವಿಸುವುದರಿಂದ ಅದ್ಭುತವಾದ ಆರೋಗ್ಯಕಾರಿ ಲಾಭಗಳಿವೆ. ದೇಹವನ್ನು ರೋಗಗಳಿಂದ ಮುಕ್ತವಾಗಿಡುವಲ್ಲಿ ಇದು ಪ್ರಮುಖ…

ತುಳಸಿ ಇಡೀ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ಔಷಧೀಯ ಗುಣಗಳು ಅಡಗಿವೆ. ನಿತ್ಯ 5-7 ತುಳಸಿ ಎಲೆಗಳನ್ನು ನಿತ್ಯ ಸೇವಿಸುವುದರಿಂದ ಅದ್ಭುತವಾದ ಆರೋಗ್ಯಕಾರಿ ಲಾಭಗಳಿವೆ. ದೇಹವನ್ನು ರೋಗಗಳಿಂದ ಮುಕ್ತವಾಗಿಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮತ್ತು ಮಧುಮೇಹ ರೋಗಿಗಳಿಗೆ ದಿವ್ಯೌಷಧ. ಈ ಎಲೆಗಳಲ್ಲಿರುವ ಔಷಧೀಯ ಗುಣಗಳು ಅನೇಕ ಸಮಸ್ಯೆಗಳನ್ನು ಮತ್ತು ರೋಗಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳನ್ನು ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಸಂಧಿವಾತವನ್ನು ಕಡಿಮೆ ಮಾಡಬಹುದು. ಇದು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಸಹ ನಿಯಂತ್ರಿಸಬಹುದು. ತುಳಸಿಯಲ್ಲಿ ಮಧುಮೇಹ ನಿವಾರಕ ಗುಣವಿದೆ. ತುಳಸಿಯಲ್ಲಿ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವ ಸಂಯುಕ್ತಗಳಿವೆ.

ಅಲ್ಲದೆ ಈ ಎಲೆಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಳಸಿಯಲ್ಲಿರುವ ಯುಜೆನಾಲ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ. ತುಳಸಿಯು ಆಯುರ್ವೇದ ಔಷಧದಲ್ಲಿ ಒಂದು ಗಿಡಮೂಲಿಕೆಯಂತೆ. ತುಳಸಿ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿವೆ. ಇದು ಹೃದ್ರೋಗಗಳು, ಕ್ಯಾನ್ಸರ್, ಸಂಧಿವಾತ, ಉಸಿರಾಟದ ತೊಂದರೆಗಳು, ಹೊಟ್ಟೆ, ಮೂತ್ರದ ಅಸ್ವಸ್ಥತೆಗಳು, ಹೊಟ್ಟೆಯ ಹುಣ್ಣುಗಳು, ಚರ್ಮ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳನ್ನು ಸೇವಿಸುವುದು ಹೊಟ್ಟೆಗೂ ಒಳ್ಳೆಯದು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಈ ತುಳಸಿ ಸರಾಸರಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 3 ರಿಂದ 8 ತುಳಸಿ ಎಲೆಗಳನ್ನು ತಿಂದರೆ ತುಂಬಾನೇ ಒಳ್ಳೆಯದು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.