Petrol diesel Price: ಭಾರತದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಗ್ಗವಾಗಿದ್ದು, ಹಾಗೆ ಕೆಲವು ರಾಜ್ಯಗಳಲ್ಲಿ ಇಂಧನ ಬೆಲೆ ಸ್ಥಿರವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.72 ರೂ ಹಾಗೂ ಡೀಸೆಲ್ ಬೆಲೆ ಲೀಟರ್ಗೆ 87.62 ರೂ ಇದ್ದು, ಮುಂಬೈನಲ್ಲಿ ಪೆಟ್ರೋಲ್ ಬೆಲೆ 103.44 ರೂ ಹಾಗೂ ಡೀಸೆಲ್ ಬೆಲೆ ಲೀಟರ್ಗೆ 89.97 ರೂ ಇದ್ದು ಸ್ವಲ್ಪ ಮಟ್ಟದಲ್ಲಿ ಬೆಲೆ ಇಳಿಕೆಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೆಲದಿನಗಳಿಂದ ಕಡಿಮೆಯಾಗುತ್ತ ಬಂದಿದ್ದು, ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ 102.86 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 88.94 ರೂ. ಇದೆ.
ಚಿನ್ನದ ಇಂದಿನ ಬೆಲೆ ಎಷ್ಟು ಗೊತ್ತಾ?
ಇನ್ನು, ಪ್ರಪಂಚದಲ್ಲೇ ಬಂಗಾರಕ್ಕೆ ವಿಶೇಷ ಸ್ಥಾನವಿದ್ದು ಇದು ಕೇವಲ ಅಂಲಕಾರದ ಆಭರಣವಾಗಿ ಮಾತ್ರವಲ್ಲದೆ ಆರ್ಥಿಕ ಪ್ರಾಬಲ್ಯತೆಯೂ ಆಗಿದೆ. ಅದರಲ್ಲೂ ಭಾರತೀಯರಿಗೂ ಚಿನ್ನಕ್ಕೂ ವಿಶೇಷ ನಂಟಿದೆ.
ಬೆಲೆ ಏರಿಕೆ ಇರಲಿ ಇಲ್ಲದಿರಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು ಇವತ್ತು ಭಾರತದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಗೆ ₹ 6,669 ಮತ್ತು ಅದೇ ರೀತಿ 24 ಕ್ಯಾರೆಟ್ ಚಿನ್ನದ ಬೆಲೆ ₹ 7,276 ಇದೆ.
https://vijayaprabha.com/private-bus-ticket-price-increase-for-ganesha-festival/




