ಇಂದು ಸಂಭ್ರಮದ ಗೌರಿ ಹಬ್ಬ; ಗೌರಿ ಹಬ್ಬದ ಶುಭ ಮುಹೂರ್ತ ಬಗ್ಗೆ ಮಾಹಿತಿ ಇಲ್ಲಿದೆ

Gouri festival 2024: ಗಣೇಶ ಚತುರ್ಥಿಯ ಒಂದು ದಿನದ ಮೊದಲು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಅಂದರೆ ಈ ದಿನ ಗೌರಿ ಅಥವಾ ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ಸಂತೋಷದ ವೈವಾಹಿಕ ಜೀವನಕ್ಕಾಗಿ…

Gouri festival 2024

Gouri festival 2024: ಗಣೇಶ ಚತುರ್ಥಿಯ ಒಂದು ದಿನದ ಮೊದಲು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಅಂದರೆ ಈ ದಿನ ಗೌರಿ ಅಥವಾ ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ.

ವಿವಾಹಿತ ಮಹಿಳೆಯರು ತಮ್ಮ ಸಂತೋಷದ ವೈವಾಹಿಕ ಜೀವನಕ್ಕಾಗಿ ಗಣೇಶನ ತಾಯಿ ಗೌರಿಯನ್ನು ಪೂಜಿಸುತ್ತಾರೆ. ಈ ದಿನ ಗೌರಿ ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿದೆ. ಪುರಾಣ ಕಥೆಯ ಪ್ರಕಾರ, ಗೌರಿಯು ತನ್ನ ದೇಹದಲ್ಲಿನ ಮಣ್ಣಿನಿಂದ ಗಣೇಶನನ್ನು ಸೃಷ್ಟಿಸಿದ್ದಳು. ಹೀಗಾಗಿ ಗೌರಿ & ಗಣೇಶನ ಮಣ್ಣಿನ ಮೂರ್ತಿಯನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ.

ಗೌರಿ ಹಬ್ಬದ ಶುಭ ಮುಹೂರ್ತ

ಗೌರಿ ಹಬ್ಬದ ತಿಥಿ ಆರಂಭ – 2024ರ ಸೆಪ್ಟೆಂಬರ್‌ 5 ರಂದು ಗುರುವಾರ ಮಧ್ಯಾಹ್ನ 12:21ಕ್ಕೆ.

Vijayaprabha Mobile App free

ಗೌರಿ ಹಬ್ಬದ ತಿಥಿ ಮುಕ್ತಾಯ – 2024ರ ಸೆಪ್ಟೆಂಬರ್‌ 6 ರಂದು ಶುಕ್ರವಾರ ಮಧ್ಯಾಹ್ನ 3:01ರವರೆಗೆ ಇರಲಿದೆ.

ಗೌರಿ ಪೂಜೆ ಮುಹೂರ್ತ – 2024ರ ಸೆಪ್ಟೆಂಬರ್‌ 6 ರಂದು ಮುಂಜಾನೆ 5:32 ರಿಂದ ಬೆಳಗ್ಗೆ 8:01 ರವರೆಗೆ.

ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು

*ಪಾರ್ವತಿ ಮಾತೆ ಯಾವಾಗಲೂ ನಿಮಗೆ ಆಶೀರ್ವಾದ ಮತ್ತು ಅದೃಷ್ಟವನ್ನು ದಯಪಾಲಿಸಲಿ.

*ನಿಮಗೆ ಶಾಶ್ವತ ಸಂತೋಷ, ಉತ್ತಮ ಆರೋಗ್ಯ & ಬುದ್ಧಿವಂತಿಕೆ, ಯಶಸ್ಸು & ಸಮೃದ್ಧಿಯನ್ನು ಗೌರಿ ನಿಮಗೆ ಅನುಗ್ರಹಿಸಲಿ.

*ಗೌರಿ ಹಬ್ಬವು ನಿಮ್ಮ ಜೀವನವನ್ನು ಭಾವಪರವಶತೆಯಿಂದ ತುಂಬಲಿ, ಸಂಗಾತಿ & ಮಕ್ಕಳಿಗೆ ಯೋಗಕ್ಷೇಮ ನೀಡಲಿ, ನಿಮ್ಮ ದೇಹ & ಆತ್ಮವನ್ನು ಶುದ್ಧೀಕರಿಸಲಿ.

*ದೇವರ ದಿವ್ಯ ಬೆಳಕು ನಿಮ್ಮ ಜೀವನದಲ್ಲಿ ಹರಡಲಿ. ಶಿವ-ಪಾರ್ವತಿಯ ಆಶೀರ್ವಾದ ನಿಮ್ಮ ಮೇಲಿರಲಿ. ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.

https://vijayaprabha.com/todays-dina-bhavishya-and-daily-panchanga/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.