HEALTH TIPS: ಅತಿಯಾದ ಸಿಗರೇಟ್ ಸೇವನೆಯಿಂದ ಗಂಟಲಲ್ಲಿ ಮೂಡಿತು ಕೂದಲು..!

ಧೂಮಪಾನ ಮಾಡುವುದು ಎಷ್ಟು ಅನಾರೋಗ್ಯಕರ ಅಭ್ಯಾಸ ಎನ್ನುವುದು ನಮಗೆ ತಿಳಿದಿರುವ ವಿಚಾರ. ಇಂದು ಜಗತ್ತಿನಲ್ಲಿ ದಾಖಲಾಗುತ್ತಿರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಧೂಮಪಾನ ಮಾಡುವವರು ಹಾಗೂ ಚೈನ್ ಸ್ಮೋಕರ್‌, ಸೆಕೆಂಡ್ ಹ್ಯಾಂಡ್ ಸ್ಮೋಕರ್‌ಗಳ ಸಂಖ್ಯೆ ಹೆಚ್ಚಿದೆ. ಧೂಮಪಾನದ…

ಧೂಮಪಾನ ಮಾಡುವುದು ಎಷ್ಟು ಅನಾರೋಗ್ಯಕರ ಅಭ್ಯಾಸ ಎನ್ನುವುದು ನಮಗೆ ತಿಳಿದಿರುವ ವಿಚಾರ. ಇಂದು ಜಗತ್ತಿನಲ್ಲಿ ದಾಖಲಾಗುತ್ತಿರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಧೂಮಪಾನ ಮಾಡುವವರು ಹಾಗೂ ಚೈನ್ ಸ್ಮೋಕರ್‌, ಸೆಕೆಂಡ್ ಹ್ಯಾಂಡ್ ಸ್ಮೋಕರ್‌ಗಳ ಸಂಖ್ಯೆ ಹೆಚ್ಚಿದೆ.

ಧೂಮಪಾನದ ಹಾನಿಯ ಕುರಿತು ಎಷ್ಟು ಜಾಗೃತೆ ಮೂಡಿಸಿದರು ಈ ಸಂಖ್ಯೆ ಇಳಿಯುತ್ತಿಲ್ಲ. ಬದಲಿಗೆ ಮತ್ತಷ್ಟು ಯುವ ಜನತೆ ಈ ಧೂಮಪಾನದ ಚಟಕ್ಕೆ ಒಳಗಾಗುತ್ತಿದ್ದಾರೆ. ಧೂಮಪಾನ ಮಾಡುವವರು ಮಾತ್ರವಲ್ಲ ಈ ಸಿಗರೇಟ್ ಸೇದುವವರ ಪಕ್ಕದಲ್ಲಿ ಅದರ ಹೊಗೆ ತೆಗೆದುಕೊಳ್ಳುವುದು ಸಹ ಅಪಾಯಕಾರಿ ಎಂದು ತಿಳಿದುಬಂದಿದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಧೂಮಪಾನ ಮಾಡುವ ಅಭ್ಯಾಸದಿಂದಾಗಿ ಗಂಟಲಿನ ಒಳಗೆ ಕೂದಲು ಬೆಳೆದಿರುವ ಅಪರೂಪದ ಹಾಗೂ ವಿಚಿತ್ರ ಘಟನೆ ವರದಿಯಾಗಿದೆ. ಸತತ 30 ವರ್ಷಗಳ ಕಾಲ ದಿನಕ್ಕೆ ಒಂದು ಪ್ಯಾಕ್ ಸಿಗರೇಟ್ ಸೇದುತ್ತಿದ್ದ 52 ವರ್ಷದ ಆಸ್ಟ್ರಿಯನ್ ವ್ಯಕ್ತಿ ಅಪರೂಪದಲ್ಲಿ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ. ಅವರ ಗಂಟಲಲ್ಲಿ ಕೂದಲು ಬೆಳೆಯಲು ಆರಂಭಿಸಿದ್ದು, ಬರೋಬ್ಬರಿ 14 ವರ್ಷಗಳ ಕಾಲ ಕೂದಲು ಗಂಟಲಿನೊಳಗೆ ಬೆಳದಿದೆ.

ಈ ಪರಿಸ್ಥಿತಿಯನ್ನು ಎಂಡೋಟ್ರಾಶಿಯಲ್ ಹೇರ್ ಎಂದು ಕರೆಯಲಾಗುತ್ತದೆ. ಈ ರೀತಿ ಆಗಲು ಪ್ರಮುಖ ಕಾರಣ ಅವರ ಧೂಮಪಾನ ಅಭ್ಯಾಸವಂತೆ. ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್‌ನ ವರದಿಯ ಪ್ರಕಾರ, ರೋಗಿಯು ಮೊದಲ ಬಾರಿಗೆ 2007 ರಲ್ಲಿ ವೈದ್ಯರನ್ನು ಭೇಟಿ ಮಾಡಿದರು, ಗಟ್ಟಿಯಾದ ಧ್ವನಿ, ಉಸಿರಾಟದ ತೊಂದರೆ ಮತ್ತು ದೀರ್ಘಕಾಲದ ಕೆಮ್ಮು ಹೊಂದಿದ್ದರಿಂದ ವೈದ್ಯರ ಬಳಿ ಬಂದಿದ್ದರು. ಈ ವೇಳೆಗಾಗಲೆ ಅವರ ಗಂಟಲಿನಲ್ಲಿ 5 ಸೆಂ.ಮೀ ಉದ್ದದ ಕೂದಲು ಬೆಳೆದಿತ್ತು. ಅವರ ಪ್ರಕಾರ 1990ರಿಂದಲೇ ಅವರು ಸಿಗರೇಟ್ ಸೇದುವ ಅಭ್ಯಾಸ ಬೆಳೆಸಿಕೊಂಡಿದ್ದರಂತೆ.

Vijayaprabha Mobile App free

ಆದರೆ 2006ರಲ್ಲಿ ಅವರಿಗೆ ಈ ಕಾಯಿಲೆಯ ಗುಣ ಲಕ್ಷಣಗಳು ಪತ್ತೆಯಾಗಲು ಪ್ರಾರಂಭವಾಗಿತ್ತು. ಇದಾದ ಬಳಿಕ ಗಂಟಲಿನಲ್ಲಿ ಕೂದಲುಗಳ ಸಂಖ್ಯೆ ಹೆಚ್ಚಾಗ ತೊಡಗಿತ್ತು. ಹೀಗಾಗಿ ಟ್ರಾಕಿಯೋಟೊಮಿ ಚಿಕಿತ್ಸೆ ಅನಿವಾರ್ಯವಾಗಿತ್ತು. ಆಮ್ಲಜನಕ ನೇರವಾಗಿ ಆತನ ಶ್ವಾಸಕೋಶ ಸೇರಲು ಕೂದಲು ಅಡ್ಡಿಯಾಗಲು ಪ್ರಾರಂಭಿಸಿದಾಗ ಆತನಿಗೆ ಟ್ಯೂಬ್ ಒಂದನ್ನು ಅಳವಡಿಸಲಾಗಿತ್ತು. ನಂತರ ಅವನ ಕಿವಿಯಿಂದ ಚರ್ಮ ಮತ್ತು ಕಾರ್ಟಿಲೆಜ್ ನಾಟಿ ಬಳಸಿ ಗಂಟಲಿನಲ್ಲಿ ತೆಗೆದಿದ್ದ ರಂಧ್ರವನ್ನು ಮುಚ್ಚಲಾಗಿತ್ತು.

ವೈದ್ಯರು ನಂತರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದರು ಮತ್ತು ಆರರಿಂದ ಒಂಬತ್ತು 2 ಇಂಚು ಉದ್ದದ ಕೂದಲನ್ನು ತೆಗೆದುಹಾಕಿದರು, ಆದರೆ ಕೂದಲು ಮತ್ತೆ ಮತ್ತೆ ಬೆಳೆಯಲು ಆರಂಭಿಸಿತ್ತು. ಸತತವಾಗಿ 14 ವರ್ಷಗಳ ಕಾಲ, ಆ ವ್ಯಕ್ತಿ ಪ್ರತಿ ವರ್ಷ ಕೂದಲನ್ನು ಹೊರತೆಗೆಯಲು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು.

ವೈದ್ಯರ ಪ್ರಕಾರ, ಕೂದಲು ಬೆಳೆಯಲು ಸಿಗರೇಟ್ ಸೇದುವ ಅಭ್ಯಾಸವೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. 2022 ರಲ್ಲಿ ವ್ಯಕ್ತಿಯು ಧೂಮಪಾನವನ್ನು ತ್ಯಜಿಸಿದ ನಂತರ ಗಂಟಲಿನಲ್ಲಿ ಕೂದಲಿನ ಬೆಳವಣಿಗೆಯ ವೇಗ ಕಡಿಮೆಯಾಗಿತ್ತು, ಬಳಿಕ ಸಂಪೂರ್ಣವಾಗಿ ನಿಂತು ಹೋಗಿತ್ತು. ಬಳಿಕ ಕೂದಲು ಬೆಳೆಯುವ ಕೋಶಗಳ ನಾಶಮಾಡಲು ಸಹ ಎಂಡೋಸ್ಕೋಪಿಕ್ ಆರ್ಗಾನ್ ಪ್ಲಾಸ್ಮಾ ಚಿಕಿತ್ಸೆ ನೆರವೇರಿಸಿದ್ದರು ಇದಾದ ಬಳಿಕ ಆತನಲ್ಲಿ ಕೂದಲು ಬೆಳೆಯುವುದು ನಿಂತು ಹೋಗಿತ್ತು. ಹೀಗೆ ಸಿಗರೇಟ್ ಸೇವನೆಯಿಂದ ಉಂಟಾಗುವ ಸಮಸ್ಯೆಗಳ ಸಾಲಿಗೆ ಈ ಹೊಸ ಸಮಸ್ಯೆಯೂ ಸೇರಿಕೊಂಡಿದೆ. ಇದರಲ್ಲಿ ಎಲ್ಲರಿಗೂ ಈ ರೀತಿ ಕೂದಲು ಬೆಳೆಯುವ ಕೋಶಗಳು ಬೆಳವಣಿಗೆಯಾಗುತ್ತವೆ ಎಂದೇನಿಲ್ಲ. ಇದು ಮೊದಲ ಹಾಗೂ ವಿಚಿತ್ರ ಪ್ರಕರಣವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.