ಸಿಂದಗಿ ವಿರಕ್ತಮಠದ ಆಸ್ತಿಗೂ ‘ವಕ್ಫ್‌’ ವಕ್ರದೃಷ್ಟಿ: ಮಠದ 1.20 ಎಕರೆ ಕಬಳಿಕೆಗೆ ಭಕ್ತರ ಆಕ್ರೋಶ

ವಿಜಯಪುರ: ಜಿಲ್ಲೆಯ ಸಿಂದಗಿಯ ವಿರಕ್ತಮಠದ 1.20 ಎಕರೆ ಭೂಮಿ ಕೂಡ ವಕ್ಫ್‌ ಬೋರ್ಡ್ ಆಸ್ತಿಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಮಠದ ಪೀಠಾಧಿಪತಿ ಹಾಗೂ ಸಂಸದ ಗೋವಿಂದ್ ಕಾರಜೋಳ ಸೇರಿ ಭಕ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ…

ವಿಜಯಪುರ: ಜಿಲ್ಲೆಯ ಸಿಂದಗಿಯ ವಿರಕ್ತಮಠದ 1.20 ಎಕರೆ ಭೂಮಿ ಕೂಡ ವಕ್ಫ್‌ ಬೋರ್ಡ್ ಆಸ್ತಿಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಮಠದ ಪೀಠಾಧಿಪತಿ ಹಾಗೂ ಸಂಸದ ಗೋವಿಂದ್ ಕಾರಜೋಳ ಸೇರಿ ಭಕ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ವಿರಕ್ತಮಠದ ಪಹಣಿಯಲ್ಲಿ ವಕ್ಫ್‌ ಬೋರ್ಡ್ ಹೆಸರು ಸೇರ್ಪಡೆಯಾಗಿರುವುದು ಶ್ರೀಗಳು ಮತ್ತು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ವಿರಕ್ತಮಠದ ಸರ್ವೇ ನಂಬರ್ 1020ರ ಪಹಣಿಯಲ್ಲಿ ವಕ್ಫ ಬೋರ್ಡ್ ಹೆಸರು ಸೇರ್ಪಡೆಯಾಗಿದೆ. 2018-19ರಲ್ಲಿಯೇ ಪಹಣಿಯ ಕಾಲಂ 11ರಲ್ಲಿ ‘ಸಿಂದಗಿ ಸುನ್ನಿ ವಕ್ಫ್‌ ಆಸ್ತಿ’ ಎಂದು ಹೆಸರು ಸೇರ್ಪಡೆಯಾಗಿದೆ. ಸಾಲಕ್ಕಾಗಿ ಹೊಸ ಉತಾರೆ ತೆಗೆದಾಗ ವಕ್ಫ್‌ ಹೆಸರು ಸೇರ್ಪಡೆ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ನೋಟಿಸ್ ನೀಡದೆಯೇ ವಕ್ಫ್‌ ಹೆಸರು ಸೇರ್ಪಡೆಯಾಗಿದೆ.

ಬಸವಣ್ಣನವರ ಕಾಲದಿಂದ ಬಳುವಳಿ:

ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಿಂದಗಿ ವಿರಕ್ತಮಠದ ಬಸವಪ್ರಭು ಮಹಾಸ್ವಾಮಿಯವರು, ಬಸವಣ್ಣನವರ ಕಾಲದಿಂದಲೇ ರಾಣಿ ಅಬ್ಬಕ್ಕನಿಂದ ಬಳುವಳಿಯಾಗಿ ಬಂದ ಮಠದ ಆಸ್ತಿಯನ್ನು ನಿನ್ನೆ ಮೊನ್ನೆ ಹುಟ್ಟಿಕೊಂಡ ವಕ್ಫ್‌ ಬೋರ್ಡ್ ತನ್ನ ಹೆಸರಿಗೆ ಪರಭಾರೆ ಮಾಡಿಕೊಳ್ಳುತ್ತದೆ ಎಂದರೆ ಇದು ಅನ್ಯಾಯದ ಪರಮಾವಧಿ. ಅಲ್ಲದೇ ರೈತರು, ಸಾರ್ವಜನಿಕರು ತಮ್ಮ ಆಸ್ತಿ ಯಾವಾಗ ಯಾರು ಕೊಳ್ಳೆ ಹೊಡೆಯುತ್ತಾರೋ ಎನ್ನುವ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಇದಕ್ಕೆ ಸರ್ಕಾರವೇ ಮುತುವರ್ಜಿ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Vijayaprabha Mobile App free

ಸಂಸದ ಕಾರಜೋಳ ಕಿಡಿ:

ಈ ಮಧ್ಯೆ, ಮಂಗಳವಾರ ಮಠಕ್ಕೆ ಭೇಟಿ ನೀಡಿದ್ದ ಬಿಜೆಪಿ ಸಂಸದ ಗೋವಿಂದ ಕಾರಜೋಳ, ಈ ಕುರಿತು ಶ್ರೀಗಳ ಜೊತೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, 2019ರ ಜನವರಿಯಲ್ಲಿಯೇ ಮಠದ ಆಸ್ತಿ ಬದಲಾವಣೆ ಮಾಡಿದ್ದಾರೆ. ಆದರೆ, ಶ್ರೀಗಳಿಗೆ ಗೊತ್ತಿಲ್ಲ. ಆಸ್ತಿ ಸರ್ವೇ ನಂ.1020ರಲ್ಲಿ 1.36 ಎಕರೆ ಉತಾರಿಯಲ್ಲಿ ದಾಖಲು ತೋರಿಸಿದ್ದಾರೆ. ಹೀಗಾಗಿ, ಜಿಲ್ಲಾ ಸಚಿವರು ಮೌಖಿಕವಾಗಿ ಕ್ರಮ ಕೈಗೊಳ್ಳಿ ಎಂದು ಹೇಳಿದಾಗ ಕ್ರಮ ಕೈಗೊಳ್ಳುವ ನೈತಿಕತೆ ಯಾವ ಅಧಿಕಾರಿಯೂ ಇರುವುದಿಲ್ಲ ಎಂದು ಕಿಡಿ ಕಾರಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.