ಇನ್ಮುಂದೆ ‘Shawarma’ ಮಾರಾಟ ಮಾಡಲು ಈ ನಿಯಮ ಕಡ್ಡಾಯ..!

ಮಾಧ್ಯಮಗಳಲ್ಲಿ Shawarma ಆಹಾರ ಪದಾರ್ಥವನ್ನು ಸೇವಿಸಿ Food Poisoning ಆಗಿರುವ ಕುರಿತು ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವಲಯಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು,…

ಮಾಧ್ಯಮಗಳಲ್ಲಿ Shawarma ಆಹಾರ ಪದಾರ್ಥವನ್ನು ಸೇವಿಸಿ Food Poisoning ಆಗಿರುವ ಕುರಿತು ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವಲಯಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳ ಕಾರ್ಪೊರೇಷನ್ ವ್ಯಾಪ್ತಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ Shawarma ದ ಆಹಾರ ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ.

ವಿಶ್ಲೇಷಣೆಗೊಳಪಡಿಸಲಾಗಿರುವ ಒಟ್ಟು 17 ಮಾದರಿಗಳಲ್ಲಿ 9 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ ಹಾಗೂ 08 ಮಾದರಿಗಳಲ್ಲಿ ಬ್ಯಾಕ್ಟಿರಿಯಾ ಮತ್ತು ಈಸ್ಟ್‍ಗಳು ಕಂಡುಬಂದಿರುವುದರಿಂದ ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಅಸುರಕ್ಷಿತ ಎಂದು ವರದಿಯಾಗಿರುವ ಆಹಾರ ಮಾದರಿಗಳ ತಯಾರಕರುಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮಗಳು 2011ರನ್ವಯ ಕಾನೂನು ಕ್ರಮವಹಿಸಲಾಗುತ್ತಿದೆ.

ಬ್ಯಾಕ್ಟಿರಿಯಾ ಮತ್ತು ಈಸ್ಟ್‍ಗಳು ಆಹಾರ ತಯಾರಿಕೆ ಸಂದರ್ಭದಲ್ಲಿನ ನೈರ್ಮಲ್ಯತೆಯ ಕೊರತೆ, ಧೀರ್ಘಕಾಲದ ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿನ ನೈರ್ಮಲ್ಯತೆಯ ಕೊರತೆಯಿಂದಾಗಿ ಕಂಡುಬರಬಹುದಾಗಿರುತ್ತದೆ. ಸಂಬಂಧಿಸಿದಂತೆ ಎಲ್ಲಾ Shawarma ಆಹಾರ ತಯಾರಕರುಗಳು ಸದರಿ ಆಹಾರದ ತಯಾರಿಕೆ. ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿ ಸಂಪೂರ್ಣ ನೈರ್ಮಲ್ಯತೆ ಮತ್ತು ಗುಣಮಟ್ಟವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಶೆಡ್ಯೂಲ್ 4ರ ಅನುಸಾರವಾಗಿ ಕಾಪಾಡಿಕೊಳ್ಳಲು ಸೂಚಿಸಿದೆ ಮತ್ತು Shawarma ವನ್ನು ಪ್ರತಿ ದಿನ ಹೊಸದಾಗಿ ತಯಾರಿಸಿ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಲು ಸೂಚಿಸಿದೆ. ಅಲ್ಲದೆ ಎಲ್ಲಾ Shawarma ಆಹಾರ ತಯಾರಕರುಗಳು ತಮ್ಮ ಉದ್ದಿಮೆಗೆ FSSAI ನೊಂದಣಿ/ಪರವಾನಿಗೆಯನ್ನು ಪಡೆದುಕೊಳ್ಳುವುದಲ್ಲದೇ ಅದನ್ನು ತಮ್ಮ ವ್ಯಾಪಾರದ ಸ್ಥಳದಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರದರ್ಶಿಸಲು ಸೂಚಿಸಿದೆ. ಪರಿಶೀಲನಾ ಭೇಟಿಯ ಸಮಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011ಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಗಿರುತ್ತದೆ.

Vijayaprabha Mobile App free

ಸಾರ್ವಜನಿಕರು ಮೇಲ್ಕಂಡ ಅಂಶಗಳನ್ನು ಗಮನಿಸಿ FSSAI ನೊಂದಣಿ/ಪರವಾನಿಗೆಯನ್ನು ಪಡೆದುಕೊಂಡಿರುವ ಮಾರಾಟಗಾರರಿಂದಲೇ Shawarma ವನ್ನು ಖರೀದಿಸಿ ಬಳಸಲು ಸಲಹೆ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಪುನರ್ ಪರಿಶೀಲನೆ ಸಂದರ್ಭದಲ್ಲಿ ಆಹಾರ ತಯಾರಕರುಗಳು ಸಂಬಂಧಿಸಿದ ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ಜರುಗಿಸಲಾಗುವುದು. ನಿಯಮಾನುಸಾರ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.