Shani Pradosha Vrata: ಶ್ರಾವಣ ಮಾಸದಲ್ಲಿ ಬರುವ ಶನಿ ಪ್ರದೋಶವು (Shani Pradosha Vrata) ವಿಶೇಷವಾದ ದಿನವಾಗಿದೆ. ಪ್ರದೋಷ ಎಂದರೆ ಕತ್ತಲೆಯನ್ನು ಹೋಗಲಾಡಿಸುವುದು. ಈ ದಿನದಂದು ಶಿವನನ್ನು ಆರಾಧಿಸುವ ಮೂಲಕ ಶನಿ ದೇವನನ್ನು(Shani deva) ಶಾಂತಗೊಳಿಸಲು ಸಾಧ್ಯವಿದೆ ಎಂದು ಹೇಳಲಾಗುತ್ತದೆ.
ಶನಿ ಪ್ರದೋಶವು ಶನಿವಾರದಂದು ತ್ರಯೋದಶಿ ತಿಥಿಯಲ್ಲಿ ಬರುವ ಪ್ರದೋಶ ವ್ರತವಾಗಿದೆ. ಪ್ರದೋಷ ಉಪವಾಸವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವ್ರತವನ್ನು ಆಚರಿಸುವ ಮೂಲಕ ಮಕ್ಕಳಿಲ್ಲದ ಪೋಷಕರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಶನಿ ದೋಷ, ಸಾಡೇಸಾತಿಯಿಂದ ಪಾರಾಗಬಹುದು.
Shani Pradosha Vrata: ಶನಿ ಪ್ರದೋಷ ಪೂಜೆಯನ್ನು ಯಾರು ಮಾಡಬೇಕು?
ಶನಿ ಪ್ರದೋಷ ಪೂಜೆಯನ್ನು ಶನಿವಾರದಂದು ಮಾಡುವುದರಿಂದ ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆದು ಶನಿದೇವರ ಕೃಪೆಯನ್ನು ಪಡೆಯಬಹುದು ಎಂದು ನಂಬಲಾಗಿದೆ. ಈ ಪೂಜೆಯನ್ನು ವಿಶೇಷವಾಗಿ ಶನಿ ದೋಷದಿಂದ ಬಳಲುತ್ತಿರುವವರು, ಶನಿ ಸಾಡೇಸಾತಿ ಸೇರಿದಂತೆ ಹಲವು ಕಾರಣಗಳಿಗೆ ಮಾಡಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.
Shani Pradosha Vrata: ಶನಿ ಪ್ರದೋಷದ ವ್ರತಾಚರಣೆ ಹೇಗೆ ಶುರುವಾಯಿತು ಗೊತ್ತೆ?
ಪ್ರಾಚೀನ ಕಾಲದಲ್ಲಿ ಒಬ್ಬ ಶೇಟ್‌ಜಿ ಮತ್ತು ಆತನ ಪತ್ನಿ ಮಕ್ಕಳಿಲ್ಲದ ಕಾರಣ ತಮ್ಮ ದುಃಖವನ್ನು ನಿವಾರಿಸಲು ತೀರ್ಥಯಾತ್ರೆಗೆ ಹೊರಟರು. ಯಾತ್ರೆಯ ಸಮಯದಲ್ಲಿ ಧ್ಯಾನದಲ್ಲಿ ಕುಳಿತಿದ್ದ ಋಷಿಯನ್ನು ನೋಡಿ ಅವರ ಮುಂದೆ ಕುಳಿತರು.
ಋಷಿ ಅವರ ದುಃಖವನ್ನು ತಿಳಿದು ಶನಿ ಪ್ರದೋಷ ವ್ರತ ಆಚರಿಸಲು ಸಲಹೆ ನೀಡಿದರು. ಶೇಟ್‌ಜಿ ಮತ್ತು ಆತನ ಪತ್ನಿ ವ್ರತವನ್ನು ಆಚರಿಸಿದ ನಂತರ ಅವರಿಗೆ ಮಗುವಿನ ಭಾಗ್ಯ ದೊರೆಯಿತು. ಅಂದಿನಿಂದ ಈ ವ್ರತ ಆಚರಿಸಿದರೆ ಶನಿದೇವ ಜೀವನದ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾರೆ ಎಂಬ ನಂಬಿಕೆಯಿದೆ.