ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ಈ ಯೋಜನೆಯಡಿ ಸಿಗಲಿದೆ ಪ್ರತಿ ತಿಂಗಳು ರೂ 4,000 ಸಾವಿರ ಸ್ಕಾಲರ್ ಶಿಪ್

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ತಂದೆ ಇಲ್ಲದ ಮಕ್ಕಳಿಗೆ ರೂ. 24000/- ಆರ್ಥಿಕ ಸಹಾಯಧನ(scholarship application) ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿಯು ಹರಿದಾಡುತ್ತಿದ್ದು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯಿಂದ…

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ತಂದೆ ಇಲ್ಲದ ಮಕ್ಕಳಿಗೆ ರೂ. 24000/- ಆರ್ಥಿಕ ಸಹಾಯಧನ(scholarship application) ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿಯು ಹರಿದಾಡುತ್ತಿದ್ದು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯಿಂದ  ಸ್ಪಷ್ಟಿಕರಣ ನೀಡಲಾಗಿದ್ದು, ಅದರ ವಿವರವನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.

ಪ್ರಾಯೋಜಕತ್ವ ಕಾರ್ಯಕ್ರಮ ಯೋಜನೆಯು ರಾಜ್ಯದಾದ್ಯಂತ 18 ವರ್ಷದೊಳಗಿನ ಮಕ್ಕಳು ದುಡಿಮೆಗೆ ಹೋಗುವುದನ್ನು ತಪ್ಪಿಸಿ ಶಿಕ್ಷಣ(education scholarship application-2024) ಮುಂದುವರೆಸುವುದನ್ನು ಉತ್ತೇಜಿಸಲು ಅನುಷ್ಠಾನಗೊಂಡ ಕಾರ್ಯಕ್ರಮವಾಗಿರುತ್ತದೆ. ಈ ಯೋಜನೆಯಡಿ ಪ್ರತಿ ತಿಂಗಳು ರೂ. 4,000/-ದಂತೆ 1 ವರ್ಷಗಳ ಅಥವಾ 18 ವರ್ಷ ತುಂಬುವವರೆಗೆ ಶಿಕ್ಷಣ ಮತ್ತು ಪೌಷ್ಠಿಕ ಆಹಾರಕ್ಕಾಗಿ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ.

ಸದರಿ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Vijayaprabha Mobile App free

Directorate of child protection yojana- ಸೌಲಭ್ಯ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಪ್ರಯೋಜನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ವಿವರ ಈ ಕೆಳಗಿನಂತಿದೆ.

1) ತಂದೆ ಇಲ್ಲದ ಮಕ್ಕಳು, ಅನಾಥ ಮಕ್ಕಳು, ತಾಯಿ ವಿಚ್ಛೇಧಿತ ಅಥವಾ ಕುಟುಂಬದಿಂದ ಪರಿತ್ಯಕ್ತಳಾಗಿದ್ದರೆ.

2) ಪೋಷಕರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೆ

3) ಪೋಷಕರು ಮಕ್ಕಳನ್ನು ನೋಡಿಕೊಳ್ಳಲು ದೈಹಿಕವಾಗಿ ಅಸಮರ್ಥವಾಗಿದ್ದರೆ

4) ಬಾಲನ್ಯಾಯ ಕಾಯ್ದೆ ಮಕ್ಕಳ ಪಾಲನೆ ಹಾಗೂ ರಕ್ಷಣೆ ಅಗತ್ಯವಿರುವ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ಹಾಜರುಪಡಿಸಿ ಗುರುತಿಸಿಕೊಂಡ ಮಕ್ಕಳು ಅಂದರೆ ಮನೆ ಇಲ್ಲದೆ ನೈಸರ್ಗಿಕ ವಿಕೋಪಕ್ಕೆ ಒಳಗಾದವರು, ಬಾಲಕಾರ್ಮಿಕರು, ಬಾಲ್ಯವಿವಾಹ ಸಂತ್ರಸ್ಥ ಮಕ್ಕಳು, ಕಳ್ಳಸಾಗಣಿಕೆಗೆ ಒಳಗಾದ ಮಕ್ಕಳು ಕಾಣೆಯಾದ ಅಥವಾ ಓಡಿಹೋದ ಮಕ್ಕಳು ಬಾಲ ಬಿಕ್ಷುಕರು ಅಥವಾ ಬೀದಿ ಬದಿ ಮಕ್ಕಳು ದೈಹಿಕ ಅಂಗವಿಕಲತೆವುಳ್ಳ ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು.

required documents for scholarship- ಅರ್ಜಿ ಸಲ್ಲಿಸ ಬೇಕಾಗುವ ದಾಖಲಾತಿಗಳು:

1) ಮರಣ ಪ್ರಮಾಣ ಪತ್ರ.

2) ವಿಚ್ಛೇದಿತರಾಗಿದ್ದರೆ ನ್ಯಾಯಾಲಯದ ಆದೇಶ.

3) ಕುಟುಂಬದಿಂದ ಪರಿತೃಗಳಾಗಿದ್ದರೆ ಪರಿತ್ಯಕ್ತ ಪ್ರಮಾಣ ಪತ್ರ.

4) ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೆ ಅಥವಾ ದೈಹಿಕ ಅಸಮರ್ಥರಾಗಿದ್ದರೆ ವೈದ್ಯಕೀಯ ಪ್ರಮಾಣ ಪತ್ರ.

5) ನೈಸರ್ಗಿಕ ವಿಕೋಪಕ್ಕೆ ಒಳಾಗಾಗಿದ್ದರೆ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಪ್ರಮಾಣ ಪತ್ರ.

6) ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಸದರಿ ಫಲಾನುಭವಿಯ ಆದಾಯವು ಗ್ರಾಮೀಣ ಪ್ರದೇಶದಲ್ಲಿದ್ದರೆ 72,000 ಹಾಗೂ ನಗರ ಪ್ರದೇಶದವರಾಗಿದ್ದರೆ ರೂ. 96,000/-ಕ್ಕೆ ನಿಗದಿಪಡಿಸಲಾಗಿದೆ.

7) ಶಾಲಾ ವ್ಯಾಸಂಗ ಪ್ರಮಾಣ ಪತ್ರ

8) ಜನನ ಪ್ರಮಾಣ ಪತ್ರ

9) ಮಗುವಿನ ಭಾವಚಿತ್ರ

10) ಮಗು ಹಾಗೂ ಪೋಷಕರ ಆಧಾರ್ ಕಾರ್ಡ್ ಪ್ರತಿ

11) ಮಗುವಿನ ಬ್ಯಾಂಕ್ ಖಾತೆ ಪ್ರತಿ(NPCI ಮ್ಯಾಪಿಂಗ್ ಮಾಡಿಸಿಕೊಳ್ಳುವುದು)

selection process- ಫಲಾನುಭವಿಗಳ ಆಯ್ಕೆ ವಿಧಾನದ ಮಾಹಿತಿ:

ಅರ್ಜಿ ಸ್ವೀಕೃತವಾದ ನಂತರದಲ್ಲಿ ಘಟಕದಿಂದ ಗೃಹ ತನಿಖೆ ನಡೆಸಿ ಸದರಿ ವರದಿಯ ಮೇರೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಯಲ್ಲಿ ತ್ರೈಮಾಸಿಕಗೊಮ್ಮೆ ಅನುಮೋದನೆ ಪಡೆದು ಆರ್ಥಿಕ ಸಹಾಯಧನ ಡಿಬಿಟಿ ಮುಖಾಂತರ ಕಲ್ಪಿಸಲಾಗುವುದು

> ಈಗಾಗಲೇ ಸದರಿ ಯೋಜನೆಯಡಿ ಸೌಲಭ್ಯ ಪಡೆದಿದ್ದಲ್ಲಿ ಪುನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ  ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

Directorate of child protection-ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ ಲಿಂಕ್: Click herechild helpline/ಸಹಾಯವಾಣಿ: 1098

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.