ಮುಂಬೈ: ನಟ ಸಲ್ಮಾನ್ ಖಾನ್ ಹೆಸರು ಹೇಳಿ ಈಗಾಗಲೇ ಅನೇಕರು ಮೋಸ ಮಾಡಿದ್ದಾರೆ. ಅದಕ್ಕೆ ಸಲ್ಮಾನ್ ಖಾನ್ ಅನೇಕ ಬಾರಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದೀಗ ಮತ್ತೊಮ್ಮೆ ಮತ್ತೊಮ್ಮೆ ಸಲ್ಲು ಅಮೆರಿಕದಲ್ಲಿ ಪರ್ಫಾರ್ಮ್ ಮಾಡುತ್ತಾರೆ ಎಂದು ಹೇಳಿ ಕೆಲವರು ಮೋಸ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆ ಸಲ್ಮಾನ್ ಖಾನ್ ಅವರು ಸ್ಪಷ್ಟನೆ ನೀಡಿದ್ದು, ಖಡಕ್ ಎಚ್ಚರಿಕೆಯನ್ನೂ ಕೂಡ ನೀಡಿದ್ದಾರೆ.
ಅಕ್ಟೋಬರ್ 5ರಂದು ಅಮೆರಿಕದಲ್ಲಿ ಸಲ್ಮಾನ್ ಖಾನ್ ಅವರು ಪರ್ಫಾರ್ಮೆನ್ಸ್ ಮಾಡುತ್ತಾರೆ ಎನ್ನುವ ಪೋಸ್ಟರ್ ವೈರಲ್ ಆಗಿದೆ. ಜೊತಗೆ ಟಿಕೆಟ್ ಬುಕಿಂಗ್ ಗೂ ಅವಕಾಶ ಕಲ್ಪಿಸಲಾಗಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಲ್ಮಾನ್ ಖಾನ್ ‘ಸಲ್ಮಾನ್ ಖಾನ್ ಆಗಲಿ ಅವರ ಯಾವುದೇ ಕಂಪನಿ ಆಗಲಿ ಪ್ರೋಗ್ರಾಂಗಳನ್ನು ಆಯೋಜನೆ ಮಾಡುತ್ತಿಲ್ಲ. ಅವರು ಪರ್ಫಾರ್ಮೆನ್ಸ್ ನೀಡುತ್ತಾರೆ ಎಂದು ವರದಿ ಆಗಿದ್ದರೆ ಅದು ಸಂಪೂರ್ಣವಾಗಿ ಸುಳ್ಳು’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
‘ನನ್ನ ಕಾರ್ಯಕ್ರಮ ಎಂದು ಹೇಳಿ ಮಾಡಲಾಗುತ್ತಿರುವ ಯಾವುದೇ ಇಮೇಲ್, ಮೆಸೇಜ್ ಹಾಗೂ ಜಾಹೀರಾತುಗಳನ್ನು ನಂಬಬೇಡಿ. ಸಲ್ಮಾನ್ ಖಾನ್ ಅವರ ಹೆಸರನ್ನು ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಕ್ಸ್ ನಲ್ಲಿ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇನ್ನು ಸಲ್ಮಾನ್ ಖಾನ್ ಅವರ ಮ್ಯಾನೇಜರ್ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೇಕ್ ಬುಕಿಂಗ್ ಸೈಟ್ ಬಗ್ಗೆ ಅವರು ವಿವರಣೆ ನೀಡಿದ್ದಾರೆ.