ಬಿಜೆಪಿ ನಾಯಕ ಸದಾನಂದಗೌಡ ಸಿಡಿದೆದ್ದಿದ್ದು ರಾಜ್ಯ ನಾಯಕತ್ವವನ್ನು ಟೀಕಿಸಿದ್ದಾರೆ. `ಆರ್.ಅಶೋಕ್‌ಗೆ ಆಡಳಿತ ಪಕ್ಷದಲ್ಲಿದ್ದು ಗೊತ್ತೇ ಹೊರತು ವಿಪಕ್ಷ ನಾಯಕನಾಗಿ ಅನುಭವವಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ ಜರುಗಿಸದೆ ಇರುವುದೇ ಪಕ್ಷ ಇಷ್ಟು ಹಾಳಾಗಲು ಕಾರಣ ಎಂದು ಗುಡುಗಿದ್ದಾರೆ.
ನಾನು ಪಕ್ಷದ ಅಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಯತ್ನಾಳ್ ಅವರನ್ನು ಸಸ್ಪೆಂಡ್ ಮಾಡಿದ್ದೇನೆ. ಎಷ್ಟೇ ದೊಡ್ಡವರಾಗಿದ್ದರೂ ಪಕ್ಷ ವಿರೋಧಿ ಆದವರನ್ನು ಬಿಡುತ್ತಿರಲಿಲ್ಲ’ ಎಂದು ಮಾಜಿ CM ಸದಾನಂದಗೌಡ ಹೇಳಿದ್ದಾರೆ.
ನಾನು ಯಾರ ಗುಂಪಿಗೂ ಸೇರಲಿಲ್ಲ
ಯಾವ ಗುಂಪಿಗೂ ಸೇರದ್ದಕ್ಕೆ ನನ್ನ ದೂರ ಮಾಡಿದರು ಎಂದು ಮಾಜಿ CM ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. `ನಾನು ಅಧ್ಯಕ್ಷ ಆಗಿದ್ದಾಗ ಯಡಿಯೂರಪ್ಪ ಅವರದ್ದು ಒಂದು ಗುಂಪು, ಅನಂತ್ ಕುಮಾರ್ ಅವರದ್ದು ಒಂದು ಗುಂಪು ಇತ್ತು. ನಾನು ಯಾವ ಗುಂಪನ್ನೂ ಸೇರದೆ ಕೆಲಸ ಮಾಡಿದೆ. ಇದರಿಂದಾಗಿ ನನ್ನನ್ನು ದೂರ ಮಾಡಿದರು’ ಎಂದಿದ್ದಾರೆ
`ನಾಲ್ಕು ಶರ್ಟು, ಪ್ಯಾಂಟ್ ತಗೊಂಡು ಬಂದುಬಿಡಿ ಎಂದು ಕಾಂಗ್ರೆಸ್ ನಾಯಕ ಕರೆದ. ನಾನು ಮತ್ತೊಬ್ಬ ಜಗದೀಶ್ ಶೆಟ್ಟರ್ ಆಗಲು ಇಷ್ಟ ಇಲ್ಲ ಎಂದೆ’ ಎಂದು ಮಾಜಿ CM ಸದಾನಂದಗೌಡ ತಿಳಿಸಿದ್ದಾರೆ.
ಇದನ್ನು ಓದಿ: ಗೃಹಿಣಿಯರೇ ಗಮನಿಸಿ: ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಈ ಕೆಲಸ ಮಾಡಿ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |