(Ration-card-:) ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಮುಖ್ಯವಾಗಿದೆ. ಅದರಲ್ಲಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಇದ್ದರೆ ಸರಿಪಡಿಸಲು ಕೆಲವು ದಿನ ಅವಕಾಶ ನೀಡಲಾಗಿತ್ತು. ಆದರೆ, ಇದೀಗ ತಿದ್ದುಪಡಿಗೆ ಇಂದೇ ಕೊನೆಯ ದಿನವಾಗಿದೆ.
ರಾಜ್ಯ ಸರ್ಕಾರದ ಗ್ಯಾಂರಟಿ ಯೋಜನೆಯ ಲಾಭ ಪಡೆಬೇಕಾದರೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿದೆ. ಆದರೆ ಕೆಲವರ ಹೆಸರು ಬಿಟ್ಟು ಹೋಗಿರಬಹುದು, ವಿಳಾಸ ಬದಲಾವಣೆ ಆಗಿರಬಹುದು ಹೀಗೆ ಆದಲ್ಲಿ ಯೋಜನೆಯ ಲಾಭದಿಂದ ವಂಚಿತರಾಗುತ್ತೀರಿ. ಹೀಗಾಗಿ ಹಲವು ಜನ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಕಾಯುತ್ತಿದ್ದರು ಅಂತಹವರಿಗೆ ಒಂದು ಅವಕಾಶ ಸಿಕ್ಕಿತ್ತು. ಆದರೆ, ಈ ತಿದ್ದುಪಡಿಗೆ ಈಗ ಇಂದೇ ಕೊನೆಯ ದಿನವಾಗಿದೆ.
ಹೌದು, ರೇಷನ್ ಕಾರ್ಡ್ ತಿದ್ದುಪಡಿ ಇಂದೇ ಕೊನೆ ದಿನವಾಗಿದ್ದು, ತಿದ್ದುಪಡಿಯಲ್ಲಿ ಏನೆಲ್ಲಾ ಅವಕಾಶ ಇದೆ ಎಂಬುದರ ಕುರಿತು ಇಲ್ಲಿದೆ ನೋಡಿ.
* ಹೆಸರು ಬದಲಾವಣೆ
* ಹೊಸ ಸದಸ್ಯರ ಸೇರ್ಪಡೆ
* ಮೃತರ ಹೆಸರು ಡಿಲೀಟ್
* ಬೇರೆ ಜಿಲ್ಲೆಗೆ ವರ್ಗಾವಣೆ
* ಳಾಸ ಪರಿಷ್ಕರಣೆ ಮಾಡಬಹುದಾಗಿದೆ.
ಎಲ್ಲಿ ತಿದ್ದುಪಡಿಗೆ ಅವಕಾಶ:
ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿದೆ. ಅಥವಾ ನಿಮ್ಮ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.