ರಂಭಾಪುರಿ ಪೀಠದಿಂದ ನರೇಗಲ್ಲ ಹಿರೇಮಠ ಶ್ರೀಗಳಿಗೆ “ಸಾಧನ ಸಿರಿ” ಪ್ರಶಸ್ತಿ ಪ್ರದಾನ

ನರೇಗಲ್ಲ (ಗದಗ): ಹೋಬಳಿ ಸಮೀಪದ ಅಬ್ಬಿಗೇರಿಯಲ್ಲಿ ನಡೆದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಸಮಾರಂಭದಲ್ಲಿ ನರೇಗಲ್ಲ ಹಿರೇಮಠ ಹಾಗೂ ಸವದತ್ತಿ ಮೂಲಿಮಠದ ಪೀಠಾಧೀಶರಾದ ಶ್ರೀ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಸಾಧನ…

Rambhapuri Dasara in Abbigeri Naregal

ನರೇಗಲ್ಲ (ಗದಗ): ಹೋಬಳಿ ಸಮೀಪದ ಅಬ್ಬಿಗೇರಿಯಲ್ಲಿ ನಡೆದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಸಮಾರಂಭದಲ್ಲಿ ನರೇಗಲ್ಲ ಹಿರೇಮಠ ಹಾಗೂ ಸವದತ್ತಿ ಮೂಲಿಮಠದ ಪೀಠಾಧೀಶರಾದ ಶ್ರೀ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಸಾಧನ ಸಿರಿ ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇತ್ತೀಚೆಗೆ ಜರುಗಿದ 33ನೇ ದಸರಾ ಧರ್ಮ ಸಮ್ಮೇಳನದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಧಿಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೆಂದ್ರ ಶಿವಾಚಾರ್ಯ ಭಗವತ್ಪಾದರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.

ಈ ವೇಳೆ ಸಿದ್ಧರಬೆಟ್ಟ- ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು, ಕೊತಬಾಳ, ಅಕ್ಕಿಆಲೂರು ಶ್ರೀಗಳು ಹಾಗೂ ಶಾಸಕ ಜಿ.ಎಸ್ . ಪಾಟೀಲ ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

Vijayaprabha Mobile App free

ಶ್ರೀಗಳ ಹಿನ್ನೆಲೆ:

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಹಿರೇಮಠ ಮನೆತನದ ಶ್ರೀ ಸದಾಶಿವಯ್ಯ- ಶ್ರೀಮತಿ ವಿಶಾಲಾಕ್ಷಮ್ಮ ಅವರ ಪುಣ್ಯಗರ್ಭದಲ್ಲಿ ಜನಿಸಿದ ಮಲ್ಲಿಕಾರ್ಜುನ ಶಿವಾಚಾರ್ಯರು ಸಂಸ್ಕೃತದಲ್ಲಿ ಎಂಎ ಪದವಿ ಪೂರ್ಣಗೊಳಿಸಿದ್ದು, 2002ರಲ್ಲಿ ನರೇಗಲ್ಲ ಹಿರೇಮಠಕ್ಕೆ 2012ರಲ್ಲಿ ಬೆಳಗಾವಿ ಜಿಲ್ಲೆ ಸವದತ್ತಿ ಮೂಲಿಮಠಕ್ಕೆ ಪಟ್ಟಾಧಿಕಾರವಾಗಿದ್ದಾರೆ. ತಮ್ಮ ಜ್ಞಾನ, ಪ್ರವಚನ, ಆಧ್ಯಾತ್ಮ ಬಲದಿಂದಲೇ ಭಕ್ತರನ್ನು ಸಂಘಟಿಸಿ ಎರಡು ಮಠಗಳನ್ನು ನಾಡಿನಲ್ಲಿ ಪ್ರಖ್ಯಾತಗೊಳಿಸಿದ್ದು, ಬಡ ಮಕ್ಕಳಿಗಾಗಿ ನರೇಗಲ್ಲನಲ್ಲಿ 2004ರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ.

ಕಾರ್ಯವೈಖರಿಗೆ ಸಂದ ಗೌರವ:

ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವೀರಶೈವ ಧರ್ಮ, ಲಿಂಗಪೂಜೆ, ಅನುಷ್ಠಾನ, ಸಿದ್ಧಾಂತ ಶಿಖಾಮಣಿ ಕುರಿತು ಪುರಾಣ-ಪ್ರವಚನ ಮಾಡುವ ಮೂಲಕ ಭಕ್ತರಿಗೆ ಸನ್ಮಾರ್ಗ ತೋರಿಸಿದ ಗುರುಗಳ ಕಾರ್ಯವೈಖರಿ, ಸಾಧನೆ ಗುರುತಿಸಿ ಶ್ರೀ ಮದ್ ರಂಭಾಪುರಿ ವೀರಸಿಂಹಾಸನಧಿಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೆಂದ್ರ ಶಿವಾಚಾರ್ಯ ಭಗವತ್ಪಾದರು “ಸಾಧನ ಸಿರಿ” ಪ್ರಶಸ್ತಿ ನೀಡಿ ಆಶೀರ್ವದಿಸಿದ್ದಾರೆ.

ಭಕ್ತರಿಂದ ಅಭಿನಂದನೆ:

ಪ್ರಶಸ್ತಿಗೆ ಭಾಜನರಾದ ಗುರುಗಳಿಗೆ ನರೇಗಲ್ಲ ಹಿರೇಮಠ ಹಾಗೂ ಸವದತ್ತಿ ಮೂಲಿಮಠದ ಸಕಲ ಸದ್ಭಕ್ತರು, ಶ್ರೀ ಜಗದ್ಗುರು ಪಂಚಾಚಾರ್ಯ ಗ್ರಾಮೀಣಾಭಿವದ್ಧಿ ಶಿಕ್ಷಣ ಸಂಸ್ಥೆ, ಶ್ರೀ ರೇಣುಕಾಚಾರ್ಯ ಶಾಲೆಯ ಶಿಕ್ಷಕಿಯರು ಹಾಗೂ ಸವದತ್ತಿ ಜ್ಞಾನಗಂಗಾ ಅಕ್ಕನ ಬಳಗದ ಮಾತೆಯರು ಗುರುಗಳಿಗೆ ಭಿನಂದನೆ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.