ನವದೆಹಲಿ: ಉತ್ತಮ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್ ಚಾನ್ಸ್. ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಬರೋಬ್ಬರಿ 18,799 ಹುದ್ದೆಗಳ ಭರ್ತಿಗೆ ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್ (Railway Recruitment Board) ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್ ಲೋಕೋ ಪೈಲಟ್ (Assistant Loco Pilot) ಹುದ್ದೆ ಇದಾಗಿದ್ದು, ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು (RRB Recruitment 2024). ಮೊದಲ ಹಂತದಲ್ಲಿ 5,696 ನೇಮಕಾತಿ ನಡೆಸಲಾಗುತ್ತಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 25.
ಹುದ್ದೆಗಳ ವಿವರ
ಅಹಮದಾಬಾದ್- 238, ಅಜ್ಮೀರ್- 228, ಬೆಂಗಳೂರು- 473, ಭೋಪಾಲ್- 284, ಭುವನೇಶ್ವರ- 280, ಬಿಲಾಸ್ಪುರ್- 1,316, ಚಂಡೀಗಢ- 66, ಚೆನ್ನೈ- 148, ಗೋರಖ್ಪುರ 43, ಗುವಾಹಟಿ- 62, ಜಮ್ಮು-ಶ್ರೀನಗರ- 39, ಕೊಲ್ಕತ್ತಾ- 345, ಮಾಲ್ಡಾ- 217, ಮುಂಬೈ- 547, ಮುಜಾಫರ್ಪುರ- 38, ಪಾಟ್ನಾ- 38, ಪ್ರಯಾಗ್ ರಾಜ್- 286, ರಾಂಚಿ- 153, ಸಿಕಂದರಾಬಾದ್- 758, ಸಿಲಿಗುರಿ- 67, ತಿರುವನಂತಪುರಂ- 70 ಹುದ್ದೆಗಳಿವೆ.
ವಿದ್ಯಾರ್ಹತೆ ಮತ್ತು ಅರ್ಜಿ ಶುಲ್ಕ
ಮೆಟ್ರಿಕ್ಯೂಲೇಷನ್ / ಎಸ್ಸೆಸ್ಸೆಲ್ಸಿ ಜತೆಗೆ ಐಟಿಐ ಶಿಕ್ಷಣವನ್ನು ಅಂಗೀಕೃತ ಸಂಸ್ಥೆಗಳಲ್ಲಿ ಪಡೆದವರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವಿಭಾಗ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳ ಅರ್ಜಿ ಶುಲ್ಕ 250 ರೂ. ಇದನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ವಯೋಮಿತಿ
ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 18 ಮತ್ತು ಗರಿಷ್ಠ 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
ಆಯ್ಕೆ ವಿಧಾನ
ಆಯ್ಕೆ ವಿಧಾನ 5 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT 1), ಎರಡನೇ ಹಂತದಲ್ಲಿ CBT 2, ಬಳಿಕ ಕಂಪ್ಯೂಟರ್ ಬೇಸ್ಟ್ ಆಪ್ಟಿಟ್ಯೂಡ್ ಟೆಸ್ಟ್ (CBAT), ನಂತರ ಡಾಕ್ಯುಮೆಂಟ್ ಪರಿಶೀಲನೆ (DV) ಮತ್ತು ಕೊನೆಯ ಹಂತದಲ್ಲಿ ವೈದ್ಯಕೀಯ ಪರೀಕ್ಷೆ (ME) ನಡೆಯಲಿದೆ. ಆಯ್ಕೆಯಾದವರಿಗೆ 19,900 ರೂ. – 63,200 ರೂ. ಮಾಸಿಕ ವೇತನವಿದೆ.
ಅಗತ್ಯವಾದ ಡಾಕ್ಯುಮೆಂಟ್
ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳು: ಇತ್ತೀಚಿನ, ಬಣ್ಣದ ಪಾಸ್‌ಪೋರ್ಟ್ ಫೋಟೊ. ಸಹಿ ಸ್ಕ್ಯಾನ್. ಇನ್ನು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು ಪಿಡಿಎಫ್ ರೂಪದಲ್ಲಿ ಎಸ್‌ಸಿ / ಎಸ್‌ಟಿ ಪ್ರಮಾಣ ಪತ್ರ ಅಪ್‌ಲೋಡ್ ಮಾಡಬೇಕು.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (www.rrbapply.gov.in)
- ಅಗತ್ಯ ಮಾಹಿತಿ ನೀಡಿ ಹೆಸರು ನೋಂದಾಯಿಸಿ ಲಾಗಿನ್ ಆಗಿ.
- ವೈಯಕ್ತಿಕ, ಶೈಕ್ಷಣಿಕ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯವಾದ ಡಾಕ್ಯುಮೆಂಟ್, ಫೋಟೊಗಳನ್ನು ನಿರ್ದಿಷ್ಟ ಅಳತೆಯಲ್ಲಿ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ತುಂಬಿ.
- ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.