(Pahani Aadhar Link) ಅಕ್ರಮ ಜಮೀನು ಮಾರಾಟಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಪಹಣಿಗೆ ಕಡ್ಡಾಯವಾಗಿ ಆಧರ್ ಜೋಡಣೆ ಮಾಡುವಂತೆ ತಿಳಿಸಿದ್ದಾರೆ. ಈ ಜೋಡಣೆಗೆ ಜುಲೈ ಅಂತ್ಯದೊಳಗೆ ಮಾತ್ರ ಗಡುವು ನೀಡಿದ್ದು, ಜುಲೈ ಅಂತ್ಯದೊಳಗೆ ಎಲ್ಲರೂ ಪಹಣಿ ಜೊತೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ 4 ಕೋಟಿ ಪಹಣಿಗಳಲ್ಲಿ ಈಗಲೇ 1.70 ಕೋಟಿ ಪಹಣಿಗೆ ಆಧಾರ್ ಸೀಡಿಂಗ್ ಮಾಡಲಾಗಿದೆ. ಉಳಿದವುಗಳನ್ನು ಅಭಿಯಾನದ ಮೂಲಕ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಆಧಾರ್ ಪಹಣಿ ಜೋಡಣೆಯಿಂದ ವಂಚನೆಗೆ ತಡೆ ಹಾಕಬಹುದು, ಇದರೊಂದಿಗೆ ಪರಿಹಾರ, ವರ್ಗಾವಣೆ ಪ್ರಕ್ರಿಯೆ ಸರಳವಾಗುತ್ತದೆ. ಜನರಿಗೆ ಸರ್ಕಾರಿ ಸೇವೆ ಬೇಗನೆ ಸಿಗುವಂತಾಗುತ್ತದೆ. ಈ ಕಾರಣದಿಂದ ಎಲ್ಲರೂ ಪಹಣಿ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ಹಾಗಾದರೆ ಹೇಗೆ ಲಿಂಕ್ ಮಾಡುವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಮೊಬೈಲ್ ಮೂಲಕವೇ ಈ ರೀತಿ ಲಿಂಕ್ ಮಾಡಿ:
- ಸರ್ಕಾರ ಬಿಡುಗಡೆ ಮಾಡಿರುವ ಭೂಮಿ ವೆಬ್ ಸೈಟ್ ಗೆ ಭೇಟಿ ನೀಡಿ. (https://landrecords.karnataka.gov.in/service4/)
- ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಗೆಟ್ ಓಟಿಪಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ಇಲ್ಲಿ ನಮೂದಿಸಿ.
- ಈಗ ಯಾರ ಹೆಸರಿನಲ್ಲಿ ಜಮೀನು ಇರುತ್ತದೆಯೋ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ verify ಮಾಡಿ.
- ನೀವು ನಮೂದಿಸಿರುವ ಆಧಾರ ಸಂಖ್ಯೆ ಸರಿಯಾಗಿದ್ದರೆ ಆಧಾರ್ ಪರಿಶೀಲಿಸಲಾಗಿದೆ ಎಂದು ಸ್ಟೇಟೆಂಟ್ ಕಾಣಬಹುದು.
- ಮುಂದಿನ ಹಂತದಲ್ಲಿ ಆಧಾರ್ ಕಾರ್ಡ್ ಪರಿಶೀಲನೆ ಬಳಸಿಕೊಂಡು ಅರ್ಜಿದಾರರ ವಿವರ ಭರ್ತಿ ಮಾಡಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ ಅದನ್ನು ಕ್ಲಿಕ್ ಮಾಡಿ.
- ಈಗ ಮತ್ತೆ ಅರ್ಜಿದಾರರ ಆಧಾರ್ ಕಾರ್ಡ್ ಅನ್ನು ಹಾಕಿ ಓಟಿಪಿ ಪಡೆದುಕೊಳ್ಳಿ.
- ಮೊಬೈಲ್ ಸಂಖ್ಯೆಗೆ ಬಂದಿರುವ ಓಟಿಪಿಯನ್ನು ಮತ್ತೆ ನಮೂದಿಸಬೇಕು.* ನಿಮ್ಮ ಆಧಾರ್ ಸಂಖ್ಯೆಗೆ ಕನೆಕ್ಟ್ ಆಗಿರುವ ಮೊಬೈಲ್ ಗೆ ಈ ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ ಸರಿಯಾಗಿ ನಮೂದಿಸಿದರೆ ಲಿಂಕ್ ಆಧಾರ್ ಎನ್ನುವ ಆಯ್ಕೆಯನ್ನು ಕಾಣುತ್ತೀರಿ.
- ಈಗ ಕೆಳಭಾಗದಲ್ಲಿ ಕಾಣುವ ಸರ್ವೇ ನಂಬರ್ ಅನ್ನು ಆಯ್ಕೆ ಮಾಡಿಕೊಂಡು ಲಿಂಕ್ ಮಾಡಿಕೊಳ್ಳಬೇಕು
- ಈಗ ನಿಮ್ಮ ಮೊಬೈಲ್ ಮತ್ತೊಂದು ಒಟಿಪಿ ಕಳುಹಿಸಲಾಗುತ್ತದೆ. ಅದನ್ನ ನಮೂದಿಸಿ verify ಓಟಿಪಿ ಎಂದು ಮಾಡಿ.
- ಬಳಿಕ ನೀವು ಆಧಾರ್ ಜೊತೆಗೆ ಪಹಣಿ ಲಿಂಕ್ ಮಾಡಲು ಬಯಸುತ್ತೀರಾ ಎನ್ನುವ ಸ್ಟೇಟೆಂಟ್ ಕಾಣಿಸುತ್ತದೆ. yes ಎಂದು ಕೊಡಿ.
- ಈಗ ನಿಮ್ಮ ಪಹಣಿ ಜೊತೆಗೆ ಆದ ಲಿಂಕ್ ಆಗಿರುತ್ತದೆ ಹಾಗೂ ಆಧಾರ್ ಲಿಂಕ್ ಆಗಿದೆ ಎನ್ನುವ ಸಂದೇಶವನ್ನು ನೀವು ಕಾಣುತ್ತೀರಿ.