Ola: ಓಲಾ ಸ್ಕೂಟರ್ ಲೋಪದ ಕುರಿತು ಒಂದೇ ವರ್ಷದಲ್ಲಿ ಬರೋಬ್ಬರಿ 10 ಸಾವಿರ ದೂರು ದಾಖಲು!

ನವದೆಹಲಿ: ಒಂದು ವರ್ಷದ ಅವಧಿಯಲ್ಲಿ ಓಲಾ ಇಲೆಕ್ಟ್ರಿಕ್ ಸ್ಕೂಟರ್ ಗುಣಮಟ್ಟ ಮತ್ತು ಮಾರಾಟ ಸೇವೆಯಲ್ಲಿನ ಲೋಪದ ಕುರಿತಾಗಿ 10 ಸಾವಿರಕ್ಕೂ ಹೆಚ್ಚು ಗ್ರಾಹಕರು ದೂರು ನೀಡಿದ್ದಾರಂತೆ! ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಸಹಾಯವಾಣಿಗೆ 10000ಕ್ಕೂ…

ನವದೆಹಲಿ: ಒಂದು ವರ್ಷದ ಅವಧಿಯಲ್ಲಿ ಓಲಾ ಇಲೆಕ್ಟ್ರಿಕ್ ಸ್ಕೂಟರ್ ಗುಣಮಟ್ಟ ಮತ್ತು ಮಾರಾಟ ಸೇವೆಯಲ್ಲಿನ ಲೋಪದ ಕುರಿತಾಗಿ 10 ಸಾವಿರಕ್ಕೂ ಹೆಚ್ಚು ಗ್ರಾಹಕರು ದೂರು ನೀಡಿದ್ದಾರಂತೆ!

ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಸಹಾಯವಾಣಿಗೆ 10000ಕ್ಕೂ ಅಧಿಕ ಗ್ರಾಹಕರು ಕಂಪನಿಯ ಸೇವೆಯಲ್ಲಿನ ಲೋಪಗಳ ಬಗ್ಗೆ ದೂರು ಸಲ್ಲಿಸಿದ್ದಾರೆನ್ನಲಾಗಿದೆ. ಗ್ರಾಹಕರು ನೀಡಿದ ದೂರುಗಳ ಬಗ್ಗೆ ಪ್ರಾಧಿಕಾರ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದು, ಇದೀಗ ಕಂಪನಿಗೆ ಶೋಕಾಸ್ ನೋಟಿಸ್ ನೀಡಿದೆ.

ಸ್ಕೂಟರ್ನಲ್ಲಿ ಹಲವಾರು ದೋಷಗಳು ಕಾಣಿಸಿಕೊಳ್ಳುತ್ತಿದ್ದು, ಉಚಿತ ಸೇವೆಗೂ ಶುಲ್ಕ, ಸಕಾಲದಲ್ಲಿ ಸೇವೆ ಒದಗಿಸದೆ ಅಸಮರ್ಪಕ ಸೇವೆ, ವಾರಂಟಿ ನಿರಾಕರಣೆ ಇನ್ನಿತರ ಸಮಸ್ಯೆಗಳ ಬಗ್ಗೆ ಗ್ರಾಹಕರು ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.