ಬೆಂಗಳೂರು: ಫೋಟೋ ತೆಗೆಯುತ್ತಿದ್ದಾಗ ಅಡ್ಡಬಂದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕಬ್ಬನ್ ಪಾರ್ಕ್‌ನಲ್ಲಿ ನಡೆದಿದೆ.
ಉತ್ತರ ಭಾರತದ ವ್ಯಕ್ತಿಯೋರ್ವ ಫೊಟೊ ತೆಗೆಯುತ್ತಿದ್ದ ವೇಳೆ ಎಚ್ಎಎಲ್ ಉದ್ಯೋಗಿ ರವಿಕಿರಣ್ ಅಡ್ಡಬಂದಿದ್ದಾರೆನ್ನಲಾಗಿದೆ. ಇದೇ ಕಾರಣಕ್ಕೆ ವ್ಯಕ್ತಿ ರವಿಕಿರಣ್ ಅವರ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾನೆ.
ಪಾರ್ಕ್ ಏನು ನಿಮ್ಮ ಅಪ್ಪಂದಾ? ಫೊಟೊ ತೆಗೆಯುವಾಗ ಯಾಕೆ ಅಡ್ಡ ಬಂದೆ? ಎಂದು ವ್ಯಕ್ತಿ ಹಲ್ಲೆ ನಡೆಸಿರುವುದಾಗಿ ರವಿಕಿರಣ್ ಕಬ್ಬನ್ ಪಾರ್ಕ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.