ಇಂದಿನಿಂದಲೇ ‘ನಂದಿನಿ’ ಹಾಲಿನ ಪ್ಯಾಕೆಟ್ ದರ ಏರಿಕೆ : ‘KMF’ ಮಾಹಿತಿ

ಬೆಂಗಳೂರು : ಪೆಟ್ರೋಲ್, ಡೀಸೆಲ್ ಬಳಿಕ ಇದೀಗ ಕೆಎಂಎಫ್ ಹಾಲಿನ ದರ ಏರಿಕೆ ಮಾಡಿದ್ದು, ಇಂದು ಮಧ್ಯಾಹ್ನದಿಂದಲೇ ಪ್ರತಿ ಪ್ಯಾಕೆಟ್ನ ಬೆಲೆ ರೂ.2 ಏರಿಕೆಯಾಗಲಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ. ಹೌದು ಹೊಸ ಹಾಲಿನ…

ಬೆಂಗಳೂರು : ಪೆಟ್ರೋಲ್, ಡೀಸೆಲ್ ಬಳಿಕ ಇದೀಗ ಕೆಎಂಎಫ್ ಹಾಲಿನ ದರ ಏರಿಕೆ ಮಾಡಿದ್ದು, ಇಂದು ಮಧ್ಯಾಹ್ನದಿಂದಲೇ ಪ್ರತಿ ಪ್ಯಾಕೆಟ್ನ ಬೆಲೆ ರೂ.2 ಏರಿಕೆಯಾಗಲಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ.

ಹೌದು ಹೊಸ ಹಾಲಿನ ಪ್ಯಾಕೆಟ್ ನಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಗುಲಿದೆ.

ಆದರೆ ರಾತ್ರಿ ಬಂದಿರುವಂತಹ ಸ್ಟಾಕ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಸದ್ಯ ಹಳೆಯ ದರದಲ್ಲಿ ಹಾಲಿನ ಪ್ಯಾಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಮಧ್ಯಾಹ್ನದ ನಂತರ ಹೊಸ ದರದಲ್ಲಿ ಹಾಲು ಮಾರಾಟ ಮಾಡಲಾಗುತ್ತದೆ. ಮಧ್ಯಾಹ್ನದಿಂದ ನಂದಿನಿ ಹಾಲಿನ ದರ ಹೆಚ್ಚಾಗಲಿದೆ ಹಾಗಾಗಿ ಸದ್ಯ ಸಾಮಾನ್ಯ ದರದಲ್ಲಿ ಹಾಲಿನ ಪ್ಯಾಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ.

Vijayaprabha Mobile App free

ಇವಾಗ ಇರುವುದು ರಾತ್ರಿ ಬಂದಿರುವ ಸ್ಟಾಕ್ ಒಂದು ಲೀಟರ್ ಒಂದು ಪ್ಯಾಕೆಟ್ ತಗೊಂಡ್ರೆ 2 ರೂಪಾಯಿ ಜಾಸ್ತಿ ಆಗುತ್ತದೆ ಅರ್ಧ ಲೀಟರ್ 2 ಪ್ಯಾಕೆಟ್ ತಗೊಂಡ್ರೆ 4 ರೂಪಾಯಿ ಜಾಸ್ತಿ ಆಗುತ್ತದೆ. ಪ್ಯಾಕೆಟ್ ಮೇಲೆ 2 ರೂಪಾಯಿ ಜಾಸ್ತಿ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ನಂದಿನಿ ಬೂತ್ ಮಾಲಿಕ ರವೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಹಾಲಿನ ದರ ಏರಿಕೆಯಾದ ಬಳಿಕ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸರ್ಕಾರ ಹೇಳಿದ ಮೇಲೆ ಹಾಲಿನ ದರ ಏರಿಕೆ ಮಾಡೇ ಮಾಡುತ್ತಾರೆ. ಮೊದಲು ಈ ಗ್ಯಾರಂಟಿಗಳನ್ನು ನಿಲ್ಲಿಸಬೇಕು ಗ್ಯಾರಂಟಿ ಹೆಸರಲ್ಲಿ ಕೊಟ್ಟು ಇದೀಗ ಎಲ್ಲಾ ಬೆಲೆಗಳ ದರಗಳನ್ನು ಏರಿಕೆ ಮಾಡುತ್ತಿದ್ದಾರೆ ಎಂದು ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬರುತ್ತಿದೆ.

ಯಾವ ನಂದಿನಿ ಹಾಲಿಗೆ ಏಷ್ಟು ಬೆಲೆ ಹೆಚ್ಚಳ? ಇಲ್ಲಿದೆ ಡೀಟೆಲ್ಸ್

1) ಟೋನ್ಡ್ ಹಾಲಿನ ಬೆಲೆ 500 ಎಂಎಲ್ ಗೆ ರೂ.22 ಇದ್ದದ್ದು 24 ರೂ ಆಗಲಿದೆ. 1 ಲೀಟರ್ ಬೆಲೆ ರೂ.42ರಿಂದ 44ಕ್ಕೆ ಏರಿಕೆಯಾಗಲಿದೆ.

2) ಹೋಮೋಜಿನೈಸ್ಡ್ ಟೋನ್ಡ್ ಹಾಲು ಅರ್ಧ ಲೀಟರ್ ರೂ.22ರಿಂದ 24ಕ್ಕೆ ಏರಿಕೆಯಾದ್ರೇ, ಒಂದು ಲೀಟರ್ ಹಾಲಿನ ದರ ರೂ.43ರಿಂದ 45 ಆಗಲಿದೆ.

3) ಹೋಮೋಜಿನೈಸ್ಡ್ ಹಸುವಿನ ಹಾಲು ಅರ್ಧ ಲೀಟರ್ ರೂ.24ರಿಂದ 26 ರೂ ಆದ್ರೇ, 1 ಲೀಟರ್ ಹಾಲಿನ ಬೆಲೆ ರೂ.46ರಿಂದ 48 ಆಗಲಿದೆ.

4) ಸ್ಪೆಷಲ್ ಅರ್ಧ ಲೀಟರ್ ಹಾಲು ರೂ.25ರಿಂದ 27, 1 ಲೀಟಲ್ ರೂ.48 ರಿಂದ 50 ರೂ ಆಗಲಿದೆ.

5) ಶುಭಂ ಹಾಲು ಅರ್ಧ ಲೀಟರ್ ಗೆ ರೂ.25 ಇದ್ದದ್ದು 27 ಆಗಲಿದೆ. 1 ಲೀಟರ್ ಬೆಲೆ 48 ರಿಂದ 50 ರೂಗೆ ಏರಿಕೆಯಾಗಲಿದೆ.

6) ಸಮೃದ್ಧಿ ಹಾಲು ಅರ್ಧ ಲೀಟರ್ ಗೆ ರೂ.26ರಿಂದ 28, 1 ಲೀಟರ್ ಗೆ ರೂ.51 ರಿಂದ 53ಕ್ಕೆ ಹೆಚ್ಚಳ ಆಗಲಿದೆ.

7) ಹೋಮೋಜಿನೈಸ್ಡ್ ಶುಭಂ ಹಾಲಿನ ಅರ್ಧ ಲೀಟರ್ ಬೆಲೆ ರೂ.25ರಿಂದ 27 ಆದ್ರೇ, 1 ಲೀಟರ್ ಬೆಲೆ ರೂ.49 ರಿಂದ 51ಕ್ಕೆ ಏರಿಯಾಗಲಿದೆ.

8) ಸಂತೃಪ್ತಿ ಹಾಲಿನ ಬೆಲೆ ಅರ್ಧ ಲೀಟರ್ ರೂ.28ರಿಂದ 30ಕ್ಕೆ, 1 ಲೀಟರ್ ಬೆಲೆ ರೂ.55 ರಿಂದ ರೂ.57ಕ್ಕೆ ಹೆಚ್ಚಳವಾಗಲಿದೆ.

9) ಶುಭಂ ಗೋಲ್ಡ್ ಹಾಲು ಅರ್ಧ ಲೀಟರ್ ಗೆ ರೂ.26ರಿಂದ 28ಕ್ಕೆ ಏರಿಕೆಯಾದ್ರೇ, 1 ಲೀಟರ್ ಹಾಲಿನ ಬೆಲೆ ರೂ.49ರಿಂದ 51 ಆಗಲಿದೆ.

10) ಡಬಲ್ ಟೋನ್ಡ್ ಹಾಲಿನ ಬೆಲೆ ಅರ್ಧ ಲೀಟರ್ ಗೆ 21 ರೂನಿಂದ 23ಕ್ಕೆ, 1 ಲೀಟರ್ ಬೆಲೆ ರೂ.41ರಿಂದ 43ಕ್ಕೆ ಏರಿಕೆಯಾಗಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.