ಕಪ್ಪತ್ತಗುಡ್ಡ ಸಮೀಪ ಗಣಿಗಾರಿಕೆಗೆ ಅನುಮತಿ ನೀಡಬೇಡಿ: ಸಾಹಿತಿ ಚಳವಳಿಯ ಎಚ್ಚರಿಕೆ

ಗದಗ: ಜಿಲ್ಲೆಯ ಕಪ್ಪತ್ತಗುಡ್ಡ ಸಮೀಪ ಯಾವುದೇ ರೀತಿಯ ಗಣಿಗಾರಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಅನುಮತಿ ನೀಡಬಾರದು, ಅನುಮತಿ ನೀಡಿದರೆ ಈ ಹಿಂದೆ ನಡೆಸಿದ ಪೊಸ್ಕೋ ವಿರೋಧಿ ಹೋರಾಟದ ಮಾದರಿಯಲ್ಲಿಯೇ ಜನ ಚಳವಳಿ ರೂಪಿಸಲಾಗುವುದು ಎಂದು…

ಗದಗ: ಜಿಲ್ಲೆಯ ಕಪ್ಪತ್ತಗುಡ್ಡ ಸಮೀಪ ಯಾವುದೇ ರೀತಿಯ ಗಣಿಗಾರಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಅನುಮತಿ ನೀಡಬಾರದು, ಅನುಮತಿ ನೀಡಿದರೆ ಈ ಹಿಂದೆ ನಡೆಸಿದ ಪೊಸ್ಕೋ ವಿರೋಧಿ ಹೋರಾಟದ ಮಾದರಿಯಲ್ಲಿಯೇ ಜನ ಚಳವಳಿ ರೂಪಿಸಲಾಗುವುದು ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸೈಹ್ಯಾದ್ರಿ ಎಂದು ಕರೆಯಲ್ಪಡುವ ಕಪ್ಪತ್ತಗುಡ್ಡ ಬಯಲು ನಾಡಿನ ಜೀವಾಳ, ವಾತಾವರಣ, ಮಳೆ ಪರಿಸರದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅದಕ್ಕಾಗಿ ಅದನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಪ್ರಮುಖವಾಗಿದೆ. ಈ ಹಿಂದೆ ಕಪ್ಪತ್ತಗುಡ್ಡದ ಮೇಲೆ ದೇಶದ ಪ್ರತಿಷ್ಠಿತ ಹಾಗೂ ವಿದೇಶಿ ಕಂಪನಿಗಳು ಕಣ್ಣು ಹಾಕಿ ಇಲ್ಲಿನ ಅಮೂಲ್ಯ ಅದಿರು ಲೂಟಿ ಮಾಡಲು ಬಂದಾಗಲೂ ಇಲ್ಲಿನ ಜನರು ದೊಡ್ಡ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಕಾಲ್ಕಿತ್ತಿದ್ದರು. ಪೋಸ್ಕೋ ಹೊರಗೆ ಹೋದ ಮೇಲೆ ಬಟ್ಟೋಟಾ, ಜಿಂದಾಲನಂತಹ ಕಂಪನಿಗಳು ಈಗಲೂ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದರು.

ಸೋಮವಾರ ರಾಜ್ಯ ವನ್ಯಜೀವಿ ಮಂಡಳಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಮತ್ತೆ 28 ಗಣಿಗಾರಿಕೆಯ ಪ್ರಸ್ತಾವನೆ ಚರ್ಚೆಗೆ ಬರಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ಅವುಗಳನ್ನು ತಿರಸ್ಕಾರ ಮಾಡಬೇಕು. ಪ್ರಸ್ತುತ ವನ್ಯಜೀವಿ ಮಂಡಳಿಯ ಸದಸ್ಯರಲ್ಲಿ ಬಹುತೇಕ ರಾಜಕಾರಣಿಗಳೇ ಇದ್ದಾರೆ ಹಾಗಾಗಿ ಅವರು ಯಾರದ್ದೋ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯಮಂತ್ರಿಗಳು ಅವಕಾಶ ನೀಡದೇ ಕಪ್ಪತ್ತಗುಡ್ಡ ಉಳಿಸಬೇಕು ಎಂದು ಬಸವರಾಜ ಒತ್ತಾಯಿಸಿದ್ದಾರೆ.

Vijayaprabha Mobile App free

ತೊಂಟದ ಶ್ರೀಗಳ ಹೋರಾಟಕ್ಕೆ ಸಿದ್ದು ಬೆಂಬಲ:

ಈ ಹಿಂದೆ ಲಿಂ. ತೊಂಟದ ಶ್ರೀಗಳ ನೇತೃತ್ವದಲ್ಲಿ ನಡೆದ ಹೋರಾಟದ ವೇದಿಕೆಗೆ ಸಿಎಂಸಿದ್ದರಾಮಯ್ಯ ಬಂದು ಭೇಟಿ ಕೊಟ್ಟು ಬೆಂಬಲಿಸಿದ್ದರು. ಈಗ ಅವರೇ ಮುಖ್ಯಮಂತ್ರಿಗಳಾಗಿದ್ದು, ಈ ಹೊಸ ಪ್ರಸ್ತಾವನೆ ಮುಂದೂಡುವುದು ಸರಿಯಲ್ಲ, ಕಪತ್ತಗುಡ್ಡ ಸುತ್ತಲೂ ಇರುವ 10 ಕಿಮಿ ವ್ಯಾಪ್ತಿ ಯಲ್ಲಿನ ಎಲ್ಲ ಮಾದರಿಯ ಗಣಿಗಾರಿಕೆ ತಿರಸ್ಕಾರ ಮಾಡಬೇಕಿದೆ. ಇಲ್ಲವಾದಲ್ಲಿ ಕಪ್ಪತ್ತಗುಡ್ಡ ಉಳಿಸಲು ಹೋರಾಟಮಾಡುವುದು ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ವಿಶೇಷ ಕಾಳಜಿ ವಹಿಸಬೇಕು. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.