ಮೊಬೈಲ್​ ಬಳಕೆದಾರರೇ ಎಚ್ಚರ : ಕಾಲ್​​​ ರಿಸೀವ್​ ಮಾಡಿದ ಕೆಲವೇ ಕ್ಷಣಗಳಲ್ಲಿ 1 ಕೋಟಿಗೂ ಅಧಿಕ ಹಣ ಕಟ್!

ಜನ ಇಂದು ಅತೀ ಹೆಚ್ಚು ಬಳಸೋದು ಮೊಬೈಲ್​​. ಒಂದೆಡೆ ತಂತ್ರಜ್ಞಾನ ಶರವೇಗದಲ್ಲಿ ಮುನ್ನುಗ್ಗುತ್ತಿರೋ ಈ ಕಾಲದಲ್ಲಿ ಅಷ್ಟೇ ಥ್ರೆಟ್​ ಕೂಡ ಇದೆ. ಹ್ಯಾಕರ್ಸ್​ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕ್ರೈಮ್​​ ಮಿತಿಮೀರಿ ನಡೆಯುತ್ತಿದೆ. ಈಗ ಕೇವಲ ಕಾಲ್​​​…

ಜನ ಇಂದು ಅತೀ ಹೆಚ್ಚು ಬಳಸೋದು ಮೊಬೈಲ್​​. ಒಂದೆಡೆ ತಂತ್ರಜ್ಞಾನ ಶರವೇಗದಲ್ಲಿ ಮುನ್ನುಗ್ಗುತ್ತಿರೋ ಈ ಕಾಲದಲ್ಲಿ ಅಷ್ಟೇ ಥ್ರೆಟ್​ ಕೂಡ ಇದೆ. ಹ್ಯಾಕರ್ಸ್​ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕ್ರೈಮ್​​ ಮಿತಿಮೀರಿ ನಡೆಯುತ್ತಿದೆ. ಈಗ ಕೇವಲ ಕಾಲ್​​​ ರಿಸೀವ್​ ಮಾಡಿದ್ದಕ್ಕೆ ಕೆಲವೇ ಕ್ಷಣಗಳಲ್ಲಿ 1 ಕೋಟಿಗೂ ಅಧಿಕ ಹಣ ಬ್ಯಾಂಕ್​ ಅಕೌಂಟ್​ನಿಂದ ಕಟ್​ ಆಗಿದೆ.

ಬೆಂಗಳೂರು ಮೂಲದ 77 ವರ್ಷದ ಹಿರಿಯ ಮಹಿಳೆ ಈ ಸ್ಕ್ಯಾಮ್​ಗೆ ಒಳಗಾಗಿದ್ದಾರೆ. ಕಾಲ್​ ಬಂತು ಎಂದು ರಿಸೀವ್​ ಮಾಡಿದ್ದಕ್ಕೆ ಬರೋಬ್ಬರಿ 1.2 ಕೋಟಿ ರೂ. ಕಳೆದುಕೊಂಡಿದ್ದಾರೆ.

ಜೂನ್ 26, 2024 ರಂದು ಒಂದು ಕಾಲ್​ ಬಂತು. ಮಹಿಳೆಗೆ ಅಪರಿಚಿತ ವ್ಯಕ್ತಿ ಕಾಲ್​ ಮಾಡಿದ್ರು. ನಾವು ಟೆಲಿಕಮ್ಯುನಿಕೇಷನ್​ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ, ನಿಮ್ಮ ಹೆಸರಲ್ಲಿ ಸಿಮ್​ ಕಾರ್ಡ್​ ಖರೀದಿ ಮಾಡಲಾಗಿದೆ. ಇದನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗಿದ್ದು, ಮುಂಬೈ ಕ್ರೈಮ್​ ಬ್ರ್ಯಾಂಚ್​​ನಲ್ಲಿ ಕೇಸ್​ ದಾಖಲಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ನಂತರ ಇದು 60 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಕೇಸ್​​. ನೀವು ಮಾಡಿಲ್ಲ ಎನ್ನೋದಾದ್ರೆ ಪರಿಶೀಲನೆಗಾಗಿ ನಿಮ್ಮ ಬ್ಯಾಂಕ್ ಖಾತೆ ವಿವರಗಳು ಕಳಿಸಿ ಎಂದಿದ್ದಾರೆ. ನಕಲಿ ಎಫ್‌ಐಆರ್‌ ಮತ್ತು ಸುಪ್ರೀಂಕೋರ್ಟ್ ಅರೆಸ್ಟ್​ ವಾರೆಂಟ್​ ​ತೋರಿಸಿ ನಂಬಿಸಿದ್ದಾರೆ.

Vijayaprabha Mobile App free

ಇನ್ನು, ಇದನ್ನು ನಂಬಿದ ಮಹಿಳೆ ಕೂಡಲೇ ಹೆದರಿ ತಮ್ಮ ಬ್ಯಾಂಕ್​ ಅಕೌಂಟ್ ಮಾಹಿತಿ ಶೇರ್​ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಆಕೆ ಖಾತೆಯಿಂದ 1,28,70,000 ರೂಪಾಯಿ ತೆಗೆದು ತನಿಖೆ ಮುಗಿದ ಬಳಿಕ ಹಣ ವಾಪಸ್‌ ನೀಡಲಾಗುವುದು ಎಂದು ಮೋಸ ಮಾಡಿದ್ದಾರೆ. ಬಳಿಕ ಮಹಿಳೆ ಎಷ್ಟೇ ಕಾಲ್​ ಮಾಡಿದ್ರೂ ನಂಬರ್​ ಸ್ವಿಚ್​ ಆಫ್​ ಬಂದಿದೆ. ಈಗ ಪೊಲೀಸರು ಈ ಕೇಸ್​ ತನಿಖೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.