ಸಂಡೂರು(ಬಳ್ಳಾರಿ): ಸಂಸದ ತುಕಾರಾಂ ಅವರು ತಮ್ಮನ್ನು ತಾವೇ ರಾಜ ಅಂತ ಹೇಳ್ಕೊಂಡಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ ದೊಡ್ಡ ಮಟ್ಟಕ್ಕೆ ಬೆಳೆದ ಶ್ರೀರಾಮುಲು ಅವರು ಯಾವತ್ತೂ ಹಾಗೇ ಹೇಳಿಲ್ಲ. ತುಕಾರಾಂ ಲೂಟಿ ರಾಜ ಎಂದು ಶಾಸಕ ಜನಾರ್ದನ ರೆಡ್ಡಿ ಅವರು ಲೇವಡಿ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಳಗೆ ಬಿದ್ದರೂ ಮಣ್ಣು ತಗುಲಿಲ್ಲ ಅಂತ ತುಕಾರಾಂ ಅಂತಿದ್ದಾರೆ. ತುಕಾರಾಂಗೆ ಇದು ಕೊನೆಯ ಚುನಾವಣೆ. ನಾನು ಯಾವುದೇ ಆಪರೇಷನ್ ಮಾಡಿಲ್ಲ. ಸ್ವಯಂಪ್ರೇರಿತರಾಗಿ ಬಿಜೆಪಿ ಶಾಲು ಹಾಕಿ ಜನರು ಜಯಘೋಷ ಕೂಗುತ್ತಿದ್ದಿದ್ದಾರೆ ಎಂದರು.
ಕಳೆದೊಂದು ವಾರದಿಂದ ಸಂಡೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಸುತ್ತಾಡಿದ್ದೇನೆ. ಜನರು ಸ್ವಯಂ ಸ್ವಯಂ ಪ್ರೇರಿತವಾಗಿ ನಮ್ಮ ಬಳಿಗೆ ಬರುದ್ದ, ಹೆಚ್ಚು ಹೆಚ್ಚು ಜನರು ಬಿಜೆಪಿ ಸೇರುತ್ತಿದ್ದಾರೆ. ನಾನು ನನ್ನ ಗೆಳೆಯ ಶ್ರೀರಾಮುಲು ಇಬ್ಬರೂ ಬಿಜೆಪಿ ಪರ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ಸಿನ ಎಷ್ಟೋ ಹೇಳಿಕೆಗಳು ಹುಸಿ ಆಗಿದ್ದಾವೆ. ನಾನು ಬಳ್ಳಾರಿ ಉಸ್ತುವಾರಿಯಾಗಿದ್ದಾಗ 250 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದೇನೆ. ಕಾಂಗ್ರೆಸ್ ನವರು ಹಾಕಿದ ರಸ್ತೆ ಕಿತ್ತು ಹೋಗ್ತಿವೆ. ಡಿಎಂಎಫ್, ಸಿಎಸ್ ಆರ್ ಫಂಡ್ ದುರುಪಯೋಗ ಆಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ವಾಲ್ಮೀಕಿ ಹಣ ಚುನಾವಣೆಗೆ ಬಳಕೆ:
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ವಾಲ್ಮೀಕಿ ನಿಗಮದ ಹಣ ಎಷ್ಟು ಬಳಕೆ ಆಗಿದೆ ಅನ್ನೋದು ಗೊತ್ತಿದೆ. ಬಳ್ಳಾರಿ, ಕಂಪ್ಲಿ, ಸಂಡೂರು, ಕೂಡ್ಲಿಗಿಯ ನಾಲ್ಕು ಶಾಸಕರ ಮೂಲಕ ವಾಲ್ಮೀಕಿ ನಿಗಮದ ಹಣ ಹಂಚಿಕೆ ಮಾಡಲಾಗಿದೆ.