ಕುಕನೂರಲ್ಲಿ ಚಿರತೆ ಪ್ರತ್ಯಕ್ಷ: ಕಲ್ಲು ಕ್ವಾರಿ ಕೆಲಸಗಾರರಲ್ಲಿ ಆತಂಕ, ಸುತ್ತಲೂ ಭಯದ ವಾತಾವರಣ

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿರುವ ಕಲ್ಲು ಕ್ವಾರಿಯ ಕಲ್ಲು, ಗರಸು ಗುಂಪಿಯಲ್ಲಿ ಚಿರತೆಗಳು ವಾಸವಿವೆ. ಇದರಿಂದ ಜನರಲ್ಲಿ ಭಯದ ಆತಂಕ ಮೂಡಿದೆ. ಕಳೆದ ನಾಲ್ಕೈದು ವರ್ಷದಿಂದ ಈ ಸ್ಥಳದಲ್ಲಿ ಚಿರತೆಗಳು ವಾಸವಿದ್ದು,…

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿರುವ ಕಲ್ಲು ಕ್ವಾರಿಯ ಕಲ್ಲು, ಗರಸು ಗುಂಪಿಯಲ್ಲಿ ಚಿರತೆಗಳು ವಾಸವಿವೆ. ಇದರಿಂದ ಜನರಲ್ಲಿ ಭಯದ ಆತಂಕ ಮೂಡಿದೆ. ಕಳೆದ ನಾಲ್ಕೈದು ವರ್ಷದಿಂದ ಈ ಸ್ಥಳದಲ್ಲಿ ಚಿರತೆಗಳು ವಾಸವಿದ್ದು, ಅರಣ್ಯ ಇಲಾಖೆಯವರು ಸಹ ಚಿರತೆ ಹಿಡಿಯಲು ಬೋನು ನಿರ್ಮಿಸಿ ಚಿರತೆ ಸೆರೆ ಹಿಡಿದಿದ್ದಾರೆ. ಆದರೆ ಚಿರತೆಗಳು ಇಲ್ಲಿ ಮರಿ ಮಾಡಿ ಅವುಗಳು ದೊಡ್ಡದಾಗಿವೆ ಎನ್ನುತ್ತಾರೆ ಇಲ್ಲಿನ ಜನರು.

ಕಲ್ಲು ಕ್ವಾರಿಗಳ ಕಲ್ಲು ಗುಂಪಿನಲ್ಲಿ ಚಿರತೆಗಳು ವಾಸಿಸುತ್ತಿವೆ. ಇವು ಜನರ ಕಣ್ಣಿಗೆ ಕಾಣುವುದಿಲ್ಲ. ಆದರೆ ಕಲ್ಲು ಕ್ವಾರಿಯಲ್ಲಿ ಅಡಗಿ ಕುಳಿತು ನಾಯಿಗಳನ್ನು ಬೇಟಿಯಾಡಿದ್ದನ್ನು ಜನರು ಕಂಡಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಜಮೀನಿನಲ್ಲಿ ಕೆಲಸ ಮಾಡಲು ಕೃಷಿ ಕೆಲಸಕ್ಕೆ ಯಾರೂ ಚಿರತೆ ಭಯದಿಂದ ತೆರಳುತ್ತಿಲ್ಲ. ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮದ ಕಲ್ಲು ಕ್ವಾರಿಯಲ್ಲಿ ದೊಡ್ಡ ದೊಡ್ಡ ಕಲ್ಲು ಗುಂಪೆಗಳಿದ್ದು, ಅಲ್ಲಿ ಚಿರತೆಗಳು ವಾಸವಾಗಿವೆ. ಕಲ್ಲು ಕ್ವಾರಿಯವರು ಅವುಗಳನ್ನು ತೆರವು ಮಾಡಿದರೆ ಜನರಿಗೆ ಅನುಕೂಲ ಆಗುತ್ತದೆ. ಚಿರತೆಗಳಿಗೆ ಕಲ್ಲು ಕ್ವಾರಿಗಳು ವಾಸವಿರಲು ಬಹಳ ಅನುಕೂಲಕರವಾಗಿಯೇ ಇವೆ. ನೀರು ಸಹ ಲಭ್ಯವಿರುತ್ತದೆ. ಕಾರಣ ಕಲ್ಲು ಕ್ವಾರಿ ಮಾಲೀಕರು ಇದನ್ನು ಗಮನ ಹರಿಸಿ ಕಲ್ಲು ಗುಂಪೆ ತೆರವಿಗೆ ಮುಂದಾಗಬೇಕು.

Vijayaprabha Mobile App free

ರೈತರ ಆಗ್ರಹ:

ಕುಕನೂರಿನ ಕಲ್ಲು ಕ್ವಾರಿಯಲ್ಲಿ ವಾಸವಿರುವ ಚಿರತೆಗಳನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿಯಬೇಕು ಎಂದು ಸುತ್ತಲಿನ ರೈತರು ಆಗ್ರಹಿಸಿದ್ದಾರೆ. ಚಿರತೆ ಭಯದಿಂದ ಕೃಷಿ ಕೆಲಸಕ್ಕೆ ಹಿನ್ನಡೆ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಕೃಷಿ ಕೆಲಸಕ್ಕೆ ಹೋಗಬೇಕಾದರೆ ಒಬ್ಬರೆ ಹೋಗುವಂತಿಲ್ಲ, ನಾಲ್ಕೈದು ಜನರನ್ನು ಕರೆದುಕೊಂಡು ಹೋಗಬೇಕು. ಚಿರತೆ ಬರುವ ಭಯದಲ್ಲಿ ನಾಲ್ಕೈದು ಜನರಿದ್ದರೆ ಅದನ್ನು ಹಿಮ್ಮೆಟ್ಟಿಸಬಹುದು ಎಂದು ಭಯ ಹೊರಹಾಕಿದ್ದಾರೆ.

ಇಲಾಖೆಯಿಂದ ಬೋನ್ ಅಳವಡಿಕೆ:

ಕಲ್ಲು ಕ್ವಾರಿಯಲ್ಲಿ ಚಿರತೆ ಇರುವ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಇರುವ ಸ್ಥಳದಲ್ಲಿ ಬೋನ್ ಸಹ ಅಳವಡಿಕೆ ಮಾಡಿದ್ದಾರೆ. ಚಿರತೆ ಕಂಡ ವಿಷಯ ತಿಳಿದು ಅದನ್ನು ಹಿಡಿಯಲು ಬೋನ್ ಅಳವಡಿಕೆ ಮಾಡಲಾಗಿದೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆ ಉಪವಲಯ ಅಧಿಕಾರಿ ಅಂದಪ್ಪ ಕುರಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.