ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣ ಮಾಡೋದ್ರಲ್ಲಿ ನಿಂಬೆಹಣ್ಣು ಬೆಸ್ಟ್ ಅಂತೆ, ಇಲ್ಲಿದೆ ಮಾಹಿತಿ!

ಶುಗರ್ ಲೆವೆಲ್ ಕಂಟ್ರೋಲ್ ಮಾಡೋದ್ರಲ್ಲಿ ನಿಂಬೆಹಣ್ಣು ಬೆಸ್ಟ್ ಅಂತೆ. ಬೇಸಿಗೆಯಲ್ಲಿ ಪ್ರಮುಖವಾಗಿ ನಮ್ಮ ದೇಹದ ತಾಪಮಾನವನ್ನು ತಂಪು ಮಾಡುವ ಗುಣವನ್ನು ನಿಂಬೆಹಣ್ಣು ಹೊಂದಿದೆ. ಇತ್ತೀಚಿನ ಸಂಶೋಧನೆ ಹೇಳುವ ಹಾಗೆ ಸಕ್ಕರೆ ಕಾಯಿಲೆಯನ್ನು ಸಹ ನಿಂಬೆ…

ಶುಗರ್ ಲೆವೆಲ್ ಕಂಟ್ರೋಲ್ ಮಾಡೋದ್ರಲ್ಲಿ ನಿಂಬೆಹಣ್ಣು ಬೆಸ್ಟ್ ಅಂತೆ. ಬೇಸಿಗೆಯಲ್ಲಿ ಪ್ರಮುಖವಾಗಿ ನಮ್ಮ ದೇಹದ ತಾಪಮಾನವನ್ನು ತಂಪು ಮಾಡುವ ಗುಣವನ್ನು ನಿಂಬೆಹಣ್ಣು ಹೊಂದಿದೆ. ಇತ್ತೀಚಿನ ಸಂಶೋಧನೆ ಹೇಳುವ ಹಾಗೆ ಸಕ್ಕರೆ ಕಾಯಿಲೆಯನ್ನು ಸಹ ನಿಂಬೆ ಹಣ್ಣು ಕಂಟ್ರೋಲ್ ಮಾಡುತ್ತದೆ ಎಂದು ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ತನ್ನ ವರದಿಯಲ್ಲಿ ತಿಳಿಸಿದೆ. ಏಕೆಂದರೆ ಇದರಲ್ಲಿ ಸಿಹಿ ಸೂಚ್ಯಂಕ ಕಡಿಮೆ ಇರಲಿದ್ದು, ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣ ಮಾಡುತ್ತದೆ ಮತ್ತು ನಮ್ಮ ದೇಹದ ಉರಿಯುತವನ್ನು ಕಂಟ್ರೋಲ್ ಮಾಡುತ್ತದೆ.

ಈಗ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳುವ ವಿಚಾರಕ್ಕೆ ಬರುವುದಾದರೆ ನಮ್ಮ ಆಹಾರ ಪದ್ಧತಿ ಇದಕ್ಕೆ ಹೊಂದಿಕೊಳ್ಳುವಂತೆ ಇರಬೇಕು. ನಮ್ಮ ಆಹಾರದಲ್ಲಿ ನಿಂಬೆಹಣ್ಣು ಸೇರಿದ್ದರೆ ಉತ್ತಮ ಎಂದು ಹೇಳಬಹುದು. ಸಕ್ಕರೆ ಕಾಯಿಲೆ ಇರುವವರಿಗೆ ನಿಂಬೆಹಣ್ಣು ಅವಶ್ಯಕ ಎಂದು ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ, ನಾರಿನ ಪ್ರಮಾಣ, ಆಂಟಿ ಇಂಪ್ಲಾಮೆಟರಿ ಮತ್ತು ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತದೆ. ಇದು ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣ ಮಾಡುವುದರ ಜೊತೆಗೆ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ.

ನಿಂಬೆಹಣ್ಣಿನಲ್ಲಿ ಇರುವಂತಹ ಕ್ಯಾಲೋರಿಗಳು ತುಂಬಾ ಕಡಿಮೆ ಇರುವುದರಿಂದ ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವಿಸಬಹುದು. ಜೊತೆಗೆ ವಿಟಮಿನ್ ಸಿ ಪ್ರಮಾಣ ನಮ್ಮ ಇನ್ಸುಲಿನ್ ಮಟ್ಟವನ್ನು ಸಹ ನಿಯಂತ್ರಣ ಮಾಡುತ್ತದೆ. ನಿಂಬೆಹಣ್ಣಿನಲ್ಲಿ ನಾರಿನ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇದು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಸಕ್ಕರೆ ಪ್ರಮಾಣ ರಕ್ತದಲ್ಲಿ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡಿಕೊಳ್ಳಲು ನಿಂಬೆ ಹಣ್ಣನ್ನು ನೀವು ಈ ರೀತಿ ಬಳಸಬಹುದು. ನಿಮ್ಮ ಆಹಾರ ಪದ್ಧತಿಯಲ್ಲಿ ನಿಂಬೆ ಹಣ್ಣಿನ ರಸವನ್ನು ಸೇರಿಸಿಕೊಳ್ಳಬಹುದು. ಹೇಗೆಂದರೆ ನೀವು ಊಟ ಮಾಡುವಾಗ ನಿಂಬೆಹಣ್ಣಿನ ಹೋಳನ್ನು ಹಿಂಡಿ ಕೆಲವು ಹನಿಗಳಷ್ಟು ನಿಂಬೆಹಣ್ಣಿನ ಹುಳಿಯನ್ನು ನಿಮ್ಮ ಊಟದಲ್ಲಿ ಬೆರೆಸಿ ಸೇವಿಸಬಹುದು.

Vijayaprabha Mobile App free

ಇನ್ನು ಯಾವುದೇ ತರಹದ ಅಡುಗೆ ಮಾಡಬೇಕಾದರೆ ಕೂಡ ರುಚಿಗಾಗಿ ನಿಂಬೆಹಣ್ಣಿನ ಹುಳಿಯನ್ನು ಸೇರಿಸಬಹುದು. ಇದು ಆಹಾರದ ಸ್ವಾದವನ್ನು ಹೆಚ್ಚಿಸುತ್ತದೆ ಜೊತೆಗೆ ತಿನ್ನುವ ಆಹಾರ ಆರೋಗ್ಯಕರವಾಗಿ ಕೂಡ ಇರುತ್ತದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಇದನ್ನು ತಯಾರಿಸುವುದು ಬಹಳ ಸುಲಭ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯುವುದರಿಂದ ಇದರ ಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆದರೆ ತುಂಬಾ ಬಿಸಿ ಇರುವ ನೀರನ್ನು ಬಳಸಬಾರದು ಮತ್ತು ಸಕ್ಕರೆ ಅಥವಾ ಸಿಹಿ ಕೂಡ ಬಳಸಬಾರದು. ಬೇಸಿಗೆ ಕಾಲದಲ್ಲಿ ಹೇಗೂ ನೀವು ದಿನದಲ್ಲಿ ಆಗಾಗ ನೀರು ಕುಡಿಯುತ್ತಲೇ ಇರುತ್ತೀರಿ. ಕುಡಿಯುವ ನೀರಿಗೆ ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ದಿನಪೂರ್ತಿ ಸ್ವಲ್ಪ ಸ್ವಲ್ಪವೇ ಹೀಗೆ ಕುಡಿಯುವುದರಿಂದ ದೇಹದಲ್ಲಿ ವಿಷಕಾರಿ ಅಂಶಗಳು ದೂರವಾಗುತ್ತವೆ ಜೊತೆಗೆ ನಿಮ್ಮ ದೇಹ ಕೂಡ ಒತ್ತಡದಿಂದ ಪಾರಾಗುತ್ತದೆ. ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.