Airavata: ಈ ತಿಂಗಳಾಂತ್ಯಕ್ಕೆ ರಸ್ತೆಗಿಳಿಯಲಿದೆ 20 ಐರಾವತ 2.0 ಬಸ್‌ಗಳು

ಬೆಂಗಳೂರು: ಐರಾವತ 2.0 ಮಾದರಿಯ 20 ಬಸ್‌ಗಳು ಅಕ್ಟೋಬರ್‌ ಕೊನೆಯೊಳಗೆ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳ್ಳಲಿದೆ. ಶಕ್ತಿಶಾಲಿ ಹ್ಯಾಲೊಜೆನ್‌ ಹೆಡ್‌ಲೈಟ್‌, ಹಗಲು ಚಾಲನಾ ಲೈಟ್‌ಗಳನ್ನು ಹೊಂದಿರುವ ಈ ಬಸ್‌ಗಳು, ಹೊಸ ಮಾದರಿಯ ಸುಂದರವಾದ ಒಳಾಂಗಣ ವಿನ್ಯಾಸ ಮತ್ತು…

ಬೆಂಗಳೂರು: ಐರಾವತ 2.0 ಮಾದರಿಯ 20 ಬಸ್‌ಗಳು ಅಕ್ಟೋಬರ್‌ ಕೊನೆಯೊಳಗೆ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳ್ಳಲಿದೆ.

ಶಕ್ತಿಶಾಲಿ ಹ್ಯಾಲೊಜೆನ್‌ ಹೆಡ್‌ಲೈಟ್‌, ಹಗಲು ಚಾಲನಾ ಲೈಟ್‌ಗಳನ್ನು ಹೊಂದಿರುವ ಈ ಬಸ್‌ಗಳು, ಹೊಸ ಮಾದರಿಯ ಸುಂದರವಾದ ಒಳಾಂಗಣ ವಿನ್ಯಾಸ ಮತ್ತು ಬಾಹ್ಯವಾಗಿ ಸ್ಕ್ಯಾಂಡಿನೇವಿಯನ್‌ ವಿನ್ಯಾಸವನ್ನು ಹೊಂದಿವೆ.

ಇಂಧನ ದಕ್ಷತೆ ಹೆಚ್ಚಿರುವ ಏರೋಡೈನಾಮಿಕ್‌ ವಿನ್ಯಾಸ ಅಳವಡಿಸಲಾಗಿದೆ. ಸುಧಾರಿತ ಎಂಜಿನ್‌, ಅಗ್ನಿ ಅವಘಡ ಎಚ್ಚರಿಕೆ ಮತ್ತು ಸುರಕ್ಷತೆ ವ್ಯವಸ್ಥೆ ಅಳವಡಿಸಲಾಗಿದೆ.

Vijayaprabha Mobile App free

ಬಸ್ಸಿನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪ್‌ಗಳಿದ್ದು, 30 ನಾಜಲ್‌ಗಳಿಂದ ನೀರು ಸರಬರಾಜು ಆಗಿ ಬೆಂಕಿ ಅವಘಡ ನಿಯಂತ್ರಿಸುವ ವ್ಯವಸ್ಥೆ ಇದಾಗಿದೆ.

ಇರುವ ಬಸ್‌ಗಳಿಗೆ ಹೋಲಿಸಿದರೆ ಅವುಗಳಿಗಿಂತ ಹೆಚ್ಚು ಉದ್ದ ಇರುವ ಬಸ್‌ನಲ್ಲಿ ಪ್ರಯಾಣಿಕರ ಆಸನಗಳ ನಡುವೆ ಅಂತರವನ್ನೂ ಹೆಚ್ಚಿಸಲಾಗಿದೆ. ವಿಶಾಲ ಲಗೇಜು ಸ್ಥಳಾವಕಾಶ, ಅತ್ಯಾಧುನಿಕ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಉತ್ತಮ ಹವಾನಿಯಂತ್ರಣ ವ್ಯವಸ್ಥೆ ಇದೆ.

ಬಸ್‌ ಹಿಂಭಾಗದಲ್ಲಿ ಫಾಗ್‌ ಲೈಟ್‌ ಅಳವಡಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ಅಪಘಾತಗಳನ್ನ ಕಡಿಮೆ ಮಾಡಲಿದೆ.

ಚಾಲಕರಿಗೆ ಸುಲಭವಾಗಿ ಕೈಗೆಟಕುವ ಚಾಲಕ ನಿಯಂತ್ರಣಗಳು ಮತ್ತು ಸ್ವಿಚ್‌ಗಳನ್ನು ಹೊಂದಿದೆ. ಬಾಗಿಲಿನ ಮೂಲಕ ಪಾದಚಾರಿಗಳನ್ನು ಸುಲಭವಾಗಿ ಚಾಲಕರು ಗಮನಿಸುವ ವ್ಯವಸ್ಥೆ ಇದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.